ನೂತನ ಪ್ರಯೋಗ -ಕಾಮಗಾರಿ ಪೂರ್ಣಗೊಳ್ಳುವ ತನಕ ವಾಹನ ಸವಾರರು ಸಹಕಾರ ನೀಡಬೇಕೆಂದು ಅಧ್ಯಕ್ಷರ ಮನವಿ
ಪುತ್ತೂರು: ನಗರಸಭೆ ದರ್ಬೆ ಸಹಿತ ಮೂರು ಕಡೆ ತೀರಾ ಹದೆಗೆಟ್ಟ ಗುಂಡಿ ತುಂಬಿದ ರಸ್ತೆಗಳಿಗೆ ಇಂಟರ್ ಲಾಕ್ ಅಳವಡಿಕೆ ಮೂಲಕ ದುರಸ್ಥಿ ಕಾರ್ಯ ಮಾಡುವ ಹೊಸ ಪ್ರಯೋಗವನ್ನು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ನೇತೃತ್ವದಲ್ಲಿ ಜು.15 ರಂದು ಆರಂಭಗೊಂಡಿದೆ.

ನಗರಸಭೆ ನಿಧಿ ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ದರ್ಬೆ ಉಷಾ ಮೆಡಿಕಲ್ ಬಳಿ, ದರ್ಬೆ ವೃತ್ತದ ಬಳಿ ಮತ್ತು ಧನ್ವಂತರಿ ಆಸ್ಪತ್ರೆಯ ಬಳಿ ರಸ್ತೆ ಗುಂಡಿಗಳನ್ನು ತಂತ್ರಜ್ಞಾನ ಬಳಸಿ ಇಂಟರ್ ಲಾಕ್ ಅಳವಡಿಕೆ ಮಾಡಲಾಗುತ್ತಿದೆ. ಮುಂದೆ ಇದು ಯಶಸ್ವಿಯಾದಲ್ಲಿ ಇನ್ನೂ ಕೆಲವು ಕಡೆ ತೀರಾ ಹದಗೆಟ್ಟ ರಸ್ತೆಗಳಿಗೂ ಇದೇ ವ್ಯವಸ್ಥೆಯಲ್ಲಿ ಮಳೆಗಾಲದಲ್ಲೇ ದುರಸ್ಥಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಗರಸಭೆ ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಸ್ಥಳೀಯ ಸದಸ್ಯೆ ವಿದ್ಯಾ ಗೌರಿ, ಇಂಜಿನಿಯರ್ ಕೃಷ್ಣಮೂರ್ತಿ ರೆಡ್ಡಿ ಸಹಿತ ಕಾಮಗಾರಿಯ ಗುತ್ತಿಗೆದಾರರು ಉಪಸ್ಥಿತರಿದ್ದರು.