ಪುತ್ತೂರು: ಮಳೆಗೆ ರಸ್ತೆ ಜಲಾವೃತವಾಗಿ ಹೊಳೆಯಂತಾಗಿದೆ.

ಭಾರೀ ಮಳೆಗೆ ಎಪಿಎಂಸಿ ಬಳಿಯ ಕಿರು ಸೇತುವೆಯ ಕಾಲುವೆಯಲ್ಲಿ ಹೂಳು ತುಂಬಿ ಮಳೆ ನೀರು ಹರಿಯಲು ಅಡ್ಡಿಯಾದ ಪರಿಣಾಮ ರಾಜಕಾಲುವೆ ಉಕ್ಕಿ ರಸ್ತೆಗೆ ಮಳೆ ನೀರು ನುಗ್ಗಿದೆ. ಆದರ್ಶ ಆಸ್ಪತ್ರೆಯ ಬಳಿ ರಸ್ತೆ ಹೊಳೆಯಂತಾಗಿದೆ.
ರಸ್ತೆಯ ತುಂಬೆಲ್ಲಾ ನೀರು ತುಂಬಿರುವ ಹಿನ್ನಲೆ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ.