ಬಡಗನ್ನೂರು: ಕಾಸರಗೋಡು ತಾಲೂಕು ನೆಟ್ಟಣಿಗೆ ಗ್ರಾಮದ ದೇವಸ್ಯ ಇಂದಾಜೆ ನಿವಾಸಿ ಸುಬ್ರಮಣ್ಯ ಭಟ್. ಐ (66 ವ) ಅಲ್ಪಕಾಲದ ಅಸೌಖ್ಯದಿಂದ ಜು.16ರಂದು ನಿಧನರಾದರು.
ಇವರು ಸುಳ್ಯಪದವಿನ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಬೆಳ್ಳೂರು ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾಗಿ, ಮತ್ತು ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಮಾಲತಿ ಪುತ್ರಿಯರಾದ ಪ್ರತಿಭಾ, ಶೋಭಿತ, ಹಾಗೂ ಅಳಿಯಂದಿರು ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
