ಆರ್ಯಾಪು ಗ್ರಾ.ಪಂ. ಸದಸ್ಯರಾದ ಸುಬ್ರಹ್ಮಣ್ಯ ಬಲ್ಯಾಯರ ನೇತೃತ್ವದಲ್ಲಿ ವಳತಡ್ಕ ಕ್ವಾಟ್ರಸ್ ಕಾಲೋನಿ ರಸ್ತೆಯ ಗಿಡಗಂಟಿಗಳ ತೆರವು

0

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ವಳತಡ್ಕ ಕ್ವಾಟ್ರಸ್ ಕಾಲೋನಿ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ತುಂಬಿ ಹೋಗಿ ಸಂಚಾರಕ್ಕೆ ತೊಡಕಾಗಿತ್ತು. ಈ ಬಗ್ಗೆ ಮಾಹಿತಿ ಅರಿತ ಗ್ರಾಮ ಪಂಚಾಯತ್ ಸದಸ್ಯರು, ದೊಡ್ಡಡ್ಕ ಶ್ರೀ‌ ಷಣ್ಮುಖ ಜೋತಿಷ್ಯಾಲಯದ ಜ್ಯೋತಿಷ್ಯರಾದ ಸುಬ್ರಹ್ಮಣ್ಯ ಬಲ್ಯಾಯರವರು ತಮ್ಮ ಸ್ವಂತ ಹಣದಿಂದ ತೆರವು ಮಾಡಿ, ರಸ್ತೆ ಬದಿಯ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿದರು. ಇವರ ಈ ಸಾಮಾಜಿಕ ಕಳಕಳಿಯ ಕೆಲಸ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here