ʼಯೋಗ ಜೀವನ ದರ್ಶನ-2025ʼ ಇದರ ಅಂಗವಾಗಿ ಸಾಮಾನ್ಯ ವಿಭಾಗ ಯೋಗ ಪ್ರಶಿಕ್ಷಣ ಶಿಬಿರ

0

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಇದರ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರಗಳು ಯೋಗ ಜೀವನ ದರ್ಶನ-2025 ಇದರ ಅಂಗವಾಗಿ ಒಕ್ಕಲಿಗ ಗೌಡ ಸಮುದಾಯ ಭವನ ತೆಂಕಿಲ ಮತ್ತು ಮುಕ್ರಂಪಾಡಿ ಸುಭದ್ರ ಕಲಾ ಮಂದಿರದಲ್ಲಿ ಸಾಮಾನ್ಯ ವಿಭಾಗ ಯೋಗ ಪ್ರಶಿಕ್ಷಣ ಶಿಬಿರವು ಜು.18ರಂದು ಉದ್ಘಾಟನೆಗೊಂಡಿತು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾತನಾಡಿದ ಬೆಂಗಳೂರಿನ ಶಿಕ್ಷಣ ಪ್ರಮುಖರಾದ ಭರತ್ ಅವರು, ಯೋಗ ಯಾಕೆ ಮಾಡಬೇಕು ಮತ್ತು ಯೋಗದಿಂದ ಮಾನಸಿಕ ಸಮತೋಲನವನ್ನು ಹೇಗೆ ಕಾಪಾಡಬಹುದು ಎಂದು ವಿವರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ನೇತ್ರಾವತಿ ವಲಯ ಸಂಚಾಲಕ ಅಶೋಕ್‌, ನಮ್ಮ ಆರೋಗ್ಯಕ್ಕೆ ಯೋಗ ಎಷ್ಟು ಮಹತ್ವ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಚಿದಾನಂದ ಬೈಲಾಡಿ, ಸಮುದಾಯ ಭವನದ ಅಧ್ಯಕ್ಷರು ರವಿ ಮುಂಗ್ಲಿ ಮನೆ, ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಂಜಿನಿ ನಿರೂಪಿಸಿ, ಅಶ್ವಿನಿ ಸ್ವಾಗತಿಸಿದರು. ಶುಭ ವಂದಿಸಿದರು.

LEAVE A REPLY

Please enter your comment!
Please enter your name here