@🖋️ವರದಿ ಉಮಾಪ್ರಸಾದ್ ರೈ ನಡುಬೈಲು
ಪುತ್ತೂರು: ಪ್ರತಿಷ್ಠಿತ ಅಂತರ್ರಾಷ್ಟ್ರೀಯ ವೇದಿಕೆಯಾದ ಸೈಂಟಿಫಿಕ್ ಲಾರೆಲ್ಸ್ನಿಂದ “ಅತ್ಯುತ್ತಮ ಸಂಶೋಧಕ ಪ್ರಶಸ್ತಿ”ಯನ್ನು ಕೆಯ್ಯೂರು ಗ್ರಾಮದ ಮಾಡಾವು ಪ್ರೊ. ಕೆ. ಎಂ. ಲೋಕನಾಥ್ ರೈ ಅವರು ಪಡೆದಿರುತ್ತಾರೆ. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೆಯ್ಯೂರು ಹಾಗೂ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಬೆಳ್ಳಾರೆಯಲ್ಲಿ ಪೂರೈಸಿ, ಪದವಿಯನ್ನು ಒಂದು ವರ್ಷ ಹರಿಹರ ಎಸ್‌ಜೆವಿಪಿ ಕಾಲೇಜ್‌ನಲ್ಲಿ ಬಳಿಕ 2 ವರ್ಷ ಪುತ್ತೂರು ಸಂತ ಫಿಲೋಮಿನಾ ಕಾಲೇಜ್‌ನಲ್ಲಿ ಮಾಡಿರುತ್ತಾರೆ.
1976-78ರಲ್ಲಿ ಮೈಸೂರಿನಲ್ಲಿ ಎಂಎಸ್‌ಇ ಮಾಡಿದ ಬಳಿಕ 5 ವರ್ಷ ಪಿಎಚ್‌ಡಿಯನ್ನು ಮಾಡಿದ್ದಾರೆ. 1982 ರಿಂದ 2016 ರತನಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ, ಒಟ್ಟು 34 ವರ್ಷ ಕಾಲ ಸೇವೆ ಸಲ್ಲಿಸಿ, 2016ರಲ್ಲಿ ನಿವೃತ್ತರಾದರು. ನಿವೃತ್ತಿ ಬಳಿಕ ರಸಾಯನಶಾಸ್ತ್ರ ಸಂಬಂಧಿಸಿದ ಪುಸ್ತಕವನ್ನು ಬರೆಯುತ್ತಿದ್ದಾರೆ. ಇವರಿಗೆ ಸಂಗೀತ ಕೇಳುವುದು ಮೆಚ್ಚಿನ ಹವ್ಯಾಸವಾಗಿದೆ. ಲೋಕನಾಥ ರೈಯವರಿಗೆ 2018 ರಲ್ಲಿ ಭಾರತ ರತ್ನ ಡಾ.ರಾಧಾಕೃಷ್ಣನ್ ಗೋಲ್ಡ್ ಮೆಡೆಲ್ ಅವಾರ್ಡ್, 2019 ರಲ್ಲಿ ಭಾರತರತ್ನ ಡಾ.ಅಬ್ದುಲ್ ಕಲಾಮ್ ಗೋಲ್ಡ್ ಮೆಡೆಲ್ ಅವಾರ್ಡ್ ಹಾಗೂ 2020ರಲ್ಲಿ ಲೈಫ್ ಟೈಪ್ ಅಚೀವ್‌ಮೆಂಟ್ ವಿಡಗುಡ್ ಇಂಟರ್ ನ್ಯಾಶನಲ್ ಸೈಂಟಿಸ್ಟ್ ಅವಾರ್ಡ್ ಅನ್ನು ಪಡೆದಿರುತ್ತಾರೆ.
ಲೋಕನಾಥ ರೈಯವರು ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ಪ್ರವರ್ತಕ ಕೊಡುಗೆಗಳು ಮತ್ತು ವೈಜ್ಞಾನಿಕ ಸಂಶೋಧನೆಗೆ ಬದ್ಧತೆಯು ಪ್ರಪಂಚದಾದ್ಯಂತದ ಅಸಂಖ್ಯಾತ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಸ್ಫೂರ್ತಿಯನ್ನು ತುಂಬಿರುವುದು ಸಂತೋಷದ ವಿಚಾರವಾಗಿದೆ.
ಮಾಡಾವು ಬೈಲಮೂಲೆ ಹುಕ್ರಪ್ಪ ರೈ-ದೇವಕಿಯವರ ಪುತ್ರನಾಗಿರುವ ಲೋಕನಾಥ ರೈಯವರ ಪತ್ನಿ ವಿಜಯಲಕ್ಷ್ಮಿ ಎಲ್ ರೈ, ಪುತ್ರ ವಿಕ್ರಮ್ ಎಲ್ ರೈಯವರು ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಇನ್ನೂರ್ವ ಪುತ್ರ ಪ್ರೀತಮ್ ಎಲ್ ರೈಯವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗಿಗಳಾಗಿರುತ್ತಾರೆ. ಸಹಕಾರರತ್ನ ಸವಣೂರು ಕೆ.ಸೀತಾರಾಮ ರೈಯವರ ಪತ್ನಿ ಕಸ್ತೂರಿಕಲಾ ಎಸ್.ರೈರವರ ಸಹೋದರನಾಗಿರುವ ಪ್ರೊ. ಕೆ. ಎಂ. ಲೋಕನಾಥ್ ರೈರವರು ಪ್ರಸ್ತುತ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ.
