ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ವತಿಯಿಂದ ಕೆದಂಬಾಡಿ ಶಕ್ತಿ ಕೇಂದ್ರದಲ್ಲಿ ಜು.26 ರಂದು ನಡೆಯಲಿರುವ ಅರ್ಧ ದಿನದ ಪ್ರಶಿಕ್ಷಣ ವರ್ಗದ ಮಾಹಿತಿ ಹಾಗೂ ಪೂರ್ವಭಾವಿ ಸಭೆಯು ಜು.17ರಂದು ತಿಂಗಳಾಡಿ ಶ್ರೀ ಮಹಾಗಣಪತಿ ಸಭಾಂಗಣದಲ್ಲಿ ನಡೆಸಲಾಯಿತು.
ಸಭೆಯಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ, ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಸುನಿಲ್ ದಡ್ಡು, ಸದಸ್ಯತ್ವ ಅಭಿಯಾನದ ಜಿಲ್ಲಾ ಸಂಚಾಲಕರಾದ ನಿತೀಶ್ ಕುಮಾರ್ ಶಾಂತಿವನ, ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ, ಗ್ರಾಮಾಂತರ ಮಂಡಲ ನಾಯಕ ಪುನೀತ್ ಮಾಡತ್ತಾರು, ಗ್ರಾಮಾಂತರ ಮಂಡಲ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಮಠ, ನರಿಮೊಗರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಸತೀಶ್ ಪಾಂಬಾರು, ನೆಟ್ಟಣಿಗೆ ಮೂಡ್ನೂರು ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷವಿಜಯಕುಮಾರ್ ರೈ ಕೋರಂಗ, ಶಕ್ತಿಕೇಂದ್ರ ಪ್ರಮುಖ್ ಶರತ್ ಗುತ್ತು, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಕೆದಂಬಾಡಿ ಶಕ್ತಿ ಕೇಂದ್ರದ ಮಾಜಿ ಪ್ರಮುಖ್ ನಾರಾಯಣ ಪೂಜಾರಿ ಕುರಿಕ್ಕಾರ, ಕೆದಂಬಾಡಿ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜನಾರ್ದನ ರೈ ಪಡ್ಡಂಬೈಲು ಹಾಗೂ ಕೆದಂಬಾಡಿ ಶಕ್ತಿಕೇಂದ್ರದ ಒಂದನೇ ಬೂತ್ ಅಧ್ಯಕ್ಷ ಮೋಹನ್ ಆಳ್ವ ಮುಂಡಾಳ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಗೌಡ ಮಂಡಲ, ಎರಡನೇ ಬೂತ್ ಅಧ್ಯಕ್ಷ ನೇಮಿರಾಜ ರೈ ಕುರಿಕ್ಕಾರ, ಮೂರನೇ ಬೂತ್ ಪ್ರಧಾನ ಕಾರ್ಯದರ್ಶಿ ಸುಭಾಷ್ ರೈ ಮಿತ್ತೋಡಿ, ಕಾರ್ಯಕರ್ತರಾದ ಮೋಹನ್ ಶೆಟ್ಟಿ ಮಜಲ ಮೂಲೆ, ನಾಲ್ಕನೇ ಬೂತ್ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತ್ಯಾಗರಾಜ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.