ಆಲಂಕಾರು: ಆಲಂಕಾರು ಪೇಟೆಯ ಖಾಸಗಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಪಾರ್ಕಿಂಗ್ ಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ರಿಕ್ಷಾ ಚಾಲಕ,ಮಾಲಕರು ಆಲಂಕಾರು ಗ್ರಾ.ಪಂಗೆ ದೂರು ನೀಡಿದ್ದಾರೆ.
ಆಲಂಕಾರು ಪೇಟೆಯ ಸುರುಳಿ ಕ್ರಾಸ್ ಮುಂಭಾಗದಲ್ಲಿರುವ ಕಾಂಪ್ಲೆಕ್ಸ್ ನಿಂದ ಇತ್ತೀಚೆಗೆ ರಸ್ತೆ ಮಾರ್ಜಿನ್ ನ್ನು ಲೆಕ್ಕಿಸದೇ ಇಂಟರ್ ಲಾಕ್ ಅಳವಡಿಸಿದ್ದು , ನಂತರ ದಿನಗಳಿಂದ 15 ವರ್ಷಗಳಿಂದ ರಿಕ್ಷಾ ಪಾರ್ಕಿಂಗ್ ಮಾಡುತ್ತಿದ್ದ ಜಾಗದಲ್ಲಿ ಇಟ್ಟಿಗೆ,ಮರಳಿನ ಗೋಣಿ ಹಗ್ಗ ಕಟ್ಟಿ 15ಕ್ಕೂ ಮಿಕ್ಕಿ ರಿಕ್ಷಾ ಚಾಲಕರಿಗೆ ತೊಂದರೆಯಾಗಿದೆ. ಮೊದಲಿನಂತೆ ಪಾರ್ಕಿಂಗ್ ಮಾಡುತ್ತಿದ್ದ ರಿಕ್ಷಾ ನಿಲ್ದಾಣಕ್ಕೆ ಯಥಾಸ್ಥಿತಿ ವ್ಯವಸ್ಥೆ ಮಾಡಿಕೊಡುವಂತೆ ಆಲಂಕಾರು ಗ್ರಾ.ಪಂ ಗೆ ರಿಕ್ಷಾ ಚಾಲಕ,ಮಾಲಕರು ದೂರು ಸಲ್ಲಿಸಿದ್ದರು.
ಸ್ಥಳಕ್ಕೆ ಪಿಡಬ್ಲೂಡಿ ಇಂಜಿನಿಯರ್ ಸೀಕ್ವೆರಾ ಮತ್ತು ಆಲಂಕಾರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಜಾತರವರು ಸ್ಥಳಕ್ಕೆ ಅಗಮಿಸಿ ರಿಕ್ಷಾ ಪಾರ್ಕಿಂಗ್ ಜಾಗದಲ್ಲಿದ್ದ ಇಟ್ಟಿಗೆ ಹಾಗು ಗೋಣಿ ಚೀಲಗಳನ್ನು ತೆರವುಗೊಳಿಸಿದರು.