ಅಧ್ಯಕ್ಷರಾಗಿ ಗಣೇಶ್ ರೈ,ಉಪಾಧ್ಯಕ್ಷರಾಗಿ ಭವಾನಿ ಪಿ,ವಿನೋದ್ ಕುಮಾರ್ ಕೆ,ಶೇಷಪ್ಪನಾಯ್ಕ

ಬೆಟ್ಟಂಪಾಡಿ: ಇಲ್ಲಿನ ನವೋದಯ ಪ್ರೌಢಶಾಲೆಯ ಶಿಕ್ಷಕ – ರಕ್ಷಕ ಸಂಘದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಗಣೇಶ್ ರೈ, ಉಪಾಧ್ಯಕ್ಷರಾಗಿ ಭವಾನಿ ಪಿ,ವಿನೋದ್ ಕುಮಾರ್ ಕೆ,ಶೇಷಪ್ಪ ನಾಯ್ಕ,ಸದಸ್ಯರಾಗಿ ಬಾಸ್ಕರ ನಾಯ್ಕ,ಗೋಪಾಲ ಜಿ,ಬಾಬು ನಾಯ್ಕ,ತಾಹಿರಾ,ಸುಗುಣ, ದಾಮೋದರ,ಝೊರಾ,ಜಯಂತಿ, ಮೋಹಿನಿ, ರಾಜೀವಿ, ಪೂರ್ಣಿಮಾ, ಮೈಮುನಾ, ಅಬ್ದುಲ್ ರಝಾಕ್, ರಂಝೀನಾ ಮತ್ತು ಫಾತಿಮತ್ ಝೊಹರಾ ಆಯ್ಕೆಯಾದರು. ಸುರಕ್ಷಾ ಸಮಿತಿಗೆ ಸವಿತಾ, ಸುಂದರಿ, ತಿಮ್ಮಕ್ಕ, ಗಿರಿಜಾ, ಸೌಮ್ಯ, ಸತೀಶ್, ದಾಮೋದರ ಆಯ್ಕೆಯಾದರು.
ಮಾತೆಯರ ಸಮಿತಿಗೆ ಪ್ರೀತಿ, ಚಂದ್ರಾವತಿ, ಫೌಝಿಯಾ, ರುಕಿಯಾ ,ವೇದಾವತಿ ,ಹಬೀಬಾ ಆಯ್ಕೆಯಾದರು. ಕ್ರೀಡಾಸಮಿತಿಗೆ ಸಿದ್ದಿಕ್, ಸತೀಶ್, ಗೌರಿ, ಶೋಭಲತಾ, ಮಮತಾ, ಖಲಂದರ್ ಹನೀಫ್, ಪ್ರೇಮಲತಾ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ಗಣೇಶ್ ರೈ ವಹಿಸಿಕೊಂಡಿದ್ದರು. ನವೋದಯ ವಿದ್ಯಾಸಮಿತಿಯ ಸಂಚಾಲಕ ಪುಷ್ಪರಾಜ್ ಶೆಟ್ಟಿ ಮತ್ತು ನವೋದಯ ವಿದ್ಯಾಸಮಿತಿಯ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ, ಶಿಕ್ಷಕ –ರಕ್ಷಕ ಸಂಘದ ಉಪಾಧ್ಯಕ್ಷರು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖ್ಯಗುರುಗಳಾದ ಪುಷ್ಪಾವತಿ ಎಸ್ ಇವರು ಶಾಲೆಯ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಕುರಿತಾಗಿ ಪ್ರಾಸ್ತಾವಿಕ ಮಾತನಾಡಿದರು. ಸಹಶಿಕ್ಷಕಿ ಗೌತಮಿ ಗಣ್ಯರನ್ನು ಸ್ವಾಗತಿಸಿದರು.
NMMS ಪರೀಕ್ಷೆಯ ಬಗ್ಗೆ ಸಹಶಿಕ್ಷಕಿ ಭುವನೇಶ್ವರಿ ಎಂ ಮಾಹಿತಿ ನೀಡಿದರು. ಶಿಕ್ಷಕ – ರಕ್ಷಕ ಸಂಘಗಳ ರಚನೆಯನ್ನು ಸಹ ಶಿಕ್ಷಕರಾದ ರಾಧಾಕೃಷ್ಣ ಆರ್ ನಡೆಸಿಕೊಡುವುದರ ಮೂಲಕ ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ಹೇಗೆ ತೊಡಗಿಸಬೇಕು ಮತ್ತು ಅವರ ಭವಿಷ್ಯ ರೂಪಿಸುವಲ್ಲಿ ಹೆತ್ತವರ ಪಾತ್ರ ಏನು ಎಂಬುದನ್ನು ಪೋಷಕರಿಗೆ ಮನವರಿಕೆ ಮಾಡಿದರು. ಕ್ರೀಡಾ ಸಮಿತಿಯ ರಚನೆಯನ್ನು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ಪಿ ನಡೆಸಿಕೊಟ್ಟರು. ಸಹಶಿಕ್ಷಕಿಯರಾದ ಸುಮಂಗಲಾ ಕೆ ಕಾರ್ಯಕ್ರಮ ನಿರೂಪಿಸಿದರು. ಶೋಭಾ ಬಿ ವಂದಿಸಿದರು.