ಕುಂಬ್ರ ವರ್ತಕರ ಸಂಘದ ಸದಸ್ಯ ಸಂಶುದ್ದೀನ್ ಎ.ಆರ್ ಮನೆಗೆ ತೆಂಗಿನ ಮರ ಬಿದ್ದು ಅಪಾರ ನಷ್ಟ 

0

ಪುತ್ತೂರು: ಕುಂಬ್ರ ವರ್ತಕರ ಸಂಘದ ಸದಸ್ಯ ಅರಿಯಡ್ಕ ಗ್ರಾಮದ ಶೇಖಮಲೆ ನಿವಾಸಿ ಸಂಶುದ್ದೀನ್ ಎ.ಆರ್ ರವರ ಮನೆಗೆ ಮರ ಬಿದ್ದು, ಅಪಾರ ನಷ್ಟ ಸಂಭವಿಸಿದ ಘಟನೆ ಜು.20 ರಂದು ಮುಂಜಾವು ಸಂಭವಿಸಿದೆ. 

ಇವರ ಮನೆಯ ಪಕ್ಕದಲ್ಲಿದ್ದ ಮರವೊಂದು ಮುಂಜಾವು 3 ಗಂಟೆಯ ಹೊತ್ತಿಗೆ ಮುರಿದು ಬಿದ್ದು ಮರವು ಸಂಶುದ್ದೀನ್ ರವರ ಮನೆಯ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಬಿದ್ದು ತೆಂಗಿನ ಮರವು ಮನೆಯ ಎದುರಿನ ಭಾಗಕ್ಕೆ ಬಿದ್ದಿದೆ. ಇದರಿಂದ ಶೀಟುಗಳು ತುಂಡಾಗಿದ್ದು ಸುಮಾರು 50 ಸಾವಿರ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಮರ ಬಿದ್ದಿರುವುದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹಗಲು ಹೊತ್ತಿನಲ್ಲಿ ಅಂಗಳದಲ್ಲಿ ವಾಹನಗಳನ್ನು ಕೂಡ ನಿಲ್ಲಿಸಲಾಗುತ್ತಿತ್ತು ಎಂದು ಮನೆ ಮಾಲೀಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here