ಗ್ರಾಮೀಣ ಪ್ರದೇಶದಲ್ಲಿ ಸೇವೆಗೆ ಪ್ರಾಮುಖ್ಯತೆ ನೀಡಬೇಕು: ಗೀತಪ್ರಕಾಶ್
ಪುತ್ತೂರು: ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬ ಇದರ 2025-26ನೇ ಸಾಲಿನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಜು.19ರಂದು ರಾತ್ರಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ’ರೈತ ಭವನ’ ಸಭಾಭವನದಲ್ಲಿ ನಡೆಯಿತು.

ಲಯನ್ಸ್ ಕ್ಲಬ್ ಪೂರ್ವ ಜಿಲ್ಲಾ ರಾಜ್ಯಪಾಲ ಗೀತಪ್ರಕಾಶ್ ಅವರು ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿ ಮಾತನಾಡಿ, ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ಲಯನ್ಸ್ ಕ್ಲಬ್ ಜಾಗತಿಕ ಚಿಂತನೆಯುಳ್ಳ ಸಂಘಟನೆಯಾಗಿದೆ. ಈ ಸಂಸ್ಥೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸೇವೆಗೆ ಪ್ರಾಮುಖ್ಯತೆ ನೀಡಬೇಕು. ಲಯನ್ಸ್ ಕ್ಲಬ್ನ ಸದಸ್ಯರು ಸೇವೆಗೆ ಸಾಥ್ ನೀಡಿ ನಿಮ್ಮಿಂದಾಗುವಷ್ಟು ಸಹಕಾರ ನೀಡಬೇಕೆಂದು ಹೇಳಿದರು. ಕೇವಲ ಅಂಕಗಳಿಕೆಗೆ ಸೇವೆ ಎಂಬಂತಾಗಬಾರದು. ಅವಶ್ಯಕತೆಗೆ ಅನುಗುಣವಾಗಿ ಸೇವೆ ಮಾಡಬೇಕು. ಕ್ಲಬ್ ಸದೃಢಗೊಳಿಸುವ ಮೂಲಕ ಹೊಸ ಸದಸ್ಯರ ಸೇರ್ಪಡೆ ಮಾಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಲಯನ್ಸ್ ಕ್ಲಬ್ ಜಿಲ್ಲಾ ಜಂಟಿ ಪಿಆರ್ಒ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಲಯನ್ಸ್ ಕ್ಲಬ್ ಹೆಚ್ಚು ಸೇವೆಯಲ್ಲಿ ನಿರತವಾಗಿದೆ. ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ಲಯನ್ಸ್ ಕ್ಲಬ್ 216 ದೇಶಗಳಲ್ಲಿ 14.50 ಲಕ್ಷ ಸದಸ್ಯರನ್ನು ಹೊಂದಿದೆ. ಇದರಲ್ಲಿ ನಾವು ಸೇರಿಕೊಂಡಿರುವುದು ನಮ್ಮ ಭಾಗ್ಯವಾಗಿದೆ. ಇಂತಹ ಲಯನ್ಸ್ ಕ್ಲಬ್ಗೆ ಸೇರುವುದು ನಮಗೆ ಹೆಮ್ಮೆ, ಗೌರವ ಎಂಬ ಮನೋಭಾವನೆ ಸಿಗಬೇಕೆಂದು ಹೇಳಿದ ಅವರು, ನಾನು ಬದುಕುವುದರೊಂದಿಗೆ ಸಮಾಜದಲ್ಲಿ ಕಷ್ಟದಲ್ಲಿರುವ ಸಾಮಾನ್ಯ ವ್ಯಕ್ತಿಗೂ ನೆರವಾಗುವ ಮನೋಭಾವನೆ ಬೆಳೆಯಬೇಕು. ನಮ್ಮಲ್ಲಿನ ಚಿಂತನೆಗಳು ಬಲಗೊಳ್ಳಬೇಕೆಂದು ಹೇಳಿದರು.

ನೂತನ ಆಡಳಿತ ಮಂಡಳಿ ಪದಸ್ವೀಕಾರ:
2025-26ನೇ ಸಾಲಿನ ಅಧ್ಯಕ್ಷರಾಗಿ ಪದ್ಮಪ್ಪ ಗೌಡ ಕೆ., ಕಾರ್ಯದರ್ಶಿಯಾಗಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ, ಕೋಶಾಧಿಕಾರಿಯಾಗಿ ಇಂದುಶೇಖರ ಶೆಟ್ಟಿ, ಉಪಾಧ್ಯಕ್ಷರಾಗಿ ಡಾ.ಹರಿದಾಸ್ ಭಟ್, ಶ್ರೀಪತಿ ರಾವ್, ಚೀಫ್ ಎಡೈಸರ್ ಆಗಿ ಸುಂದರ ಗೌಡ, ಸರ್ವೀಸ್ ಚೆಯರ್ಪರ್ಸನ್ ಆಗಿ ನಿತ್ಯಾನಂದ ಶೆಟ್ಟಿ, ಕ್ಲಬ್ ಎಡ್ಮಿನಿಸ್ಟ್ರೇಷನ್ ಆಗಿ ಸುಧಾಕರ ರೈ, ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಶನ್ ಆಗಿ ಮೋಹನದಾಸ್ ರೈ, ಕ್ಲಬ್ ಪಿಆರ್ಒ ಆಗಿ ಚಂದ್ರಶೇಖರ ರೈ, ಮೆಂಬರ್ಶಿಪ್ ಚೆಯರ್ಪರ್ಸನ್ ಆಗಿ ಕಿರಣ್, ಕ್ಲಬ್ ಟೇಮರ್ ಆಗಿ ಸುಭಾಸ್ ಶೆಟ್ಟಿ ಕೊಲ, ನಿರ್ದೇಶಕರಾಗಿ ದಯಾನಂದ ರೈ, ಪ್ರಶಾಂತ್ ರೈ, ಪುಷ್ಪ ಎಸ್.ಶೆಟ್ಟಿ, ಹೇಮಂತ್ ರೈ ಅವರು ಅಧಿಕಾರ ಸ್ವೀಕಾರ ಮಾಡಿದರು. ಪೂರ್ವ ಜಿಲ್ಲಾ ರಾಜ್ಯಪಾಲ ಗೀತಪ್ರಕಾಶ್ ಅವರು ಪದಗ್ರಹಣ ನೆರವೇರಿಸಿದರು.

ಸನ್ಮಾನ/ಗೌರವಾರ್ಪಣೆ:
ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸತ್ಯಾವತಿ ಲಕ್ಷ್ಮೀನಾರಾಯಣ ಪ್ರಭು ಆಲಂಕಾರು, ಪದಗ್ರಹಣ ನೆರವೇರಿಸಿದ ಪೂರ್ವ ಜಿಲ್ಲಾ ರಾಜ್ಯಪಾಲ ಗೀತಪ್ರಕಾಶ್, ಮುಖ್ಯ ಅತಿಥಿಯಾಗಿದ್ದ ಲಯನ್ಸ್ ಕ್ಲಬ್ ಜಿಲ್ಲಾ ಜಂಟಿ ಪಿಆರ್ಒ ಕಾವು ಹೇಮನಾಥ ಶೆಟ್ಟಿಯವರನ್ನು ಆಲಂಕಾರು ದುರ್ಗಾಂಬ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 2024-25ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 611 ಅಂಕ ಪಡೆದುಕೊಂಡ ಚಿತ್ರೇಶ್, ಪಿಯುಸಿಯಲ್ಲಿ 569 ಅಂಕ ಪಡೆದುಕೊಂಡು ಸ್ಪರ್ಧಾ ಶೆಟ್ಟಿ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಕಿಶನ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಆಲಂಕಾರು ದುರ್ಗಾಂಬ ಲಯನ್ಸ್ ಕ್ಲಬ್ನ 2024-25ನೇ ಸಾಲಿನ ಅಧ್ಯಕ್ಷ ಲಕ್ಷ್ಮೀ ನಾರಾಯಣ ಪ್ರಭು, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಸುಂದರ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀಪತಿ ರಾವ್ ಸನ್ಮಾನಿತರನ್ನು ಪರಿಚಯಿಸಿದರು.
ಹೊಸ ಸದಸ್ಯರ ಸೇರ್ಪಡೆ:
ಆಲಂಕಾರು ದುರ್ಗಾಂಬ ಲಯನ್ಸ್ ಕ್ಲಬ್ಗೆ ಗಣೇಶ್ ರೈ ಮನವಳಿಕೆ ಹೊಸ ಸದಸ್ಯರಾಗಿ ಸೇರ್ಪಡೆಗೊಂಡರು.

ಅಧಿಕಾರ ಸ್ವೀಕಾರ ಮಾಡಿದ ನೂತನ ಅಧ್ಯಕ್ಷ ಪದ್ಮಪ್ಪ ಗೌಡ ಮಾತನಾಡಿ, ಲಯನ್ಸ್ ಕ್ಲಬ್ ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ತತ್ವ ಹೊಂದಿದೆ. ವಿಶ್ರಾಂತ ಜೀವನದಲ್ಲಿ ಸೇವೆ ಮಾಡುವ ಅವಕಾಶವನ್ನು ಲಯನ್ಸ್ ಕ್ಲಬ್ ಕಲ್ಪಿಸಿಕೊಟ್ಟಿದೆ. ಈ ಹಿಂದೆ ಜೆಸಿಐಯಲ್ಲೂ ಪದಾಧಿಕಾರಿಯಾಗಿ ಸೇವೆ ಮಾಡಿದ ಅನುಭವವಿದೆ. ಹಿರಿಯ ಲಯನ್ಸ್ಗಳ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಆದಷ್ಟೂ ಸೇವಾ ಚಟುವಟಿಕೆ ನಡೆಸಲು ಬದ್ಧನಾಗಿದ್ದೇನೆ ಎಂದರು.

ನಿರ್ಗಮನ ಅಧ್ಯಕ್ಷ ಲಕ್ಷ್ಮೀನಾರಾಯಣ ಪ್ರಭು ಅವರು ಮಾತನಾಡಿ, 1 ವರ್ಷದಲ್ಲಿ ಸದಸ್ಯರ ಸಹಕಾರದೊಂದಿಗೆ ಸಾಧ್ಯವಾದಷ್ಟೂ ಸೇವಾ ಚಟುವಟಿಕೆ ನಡೆಸಿದ್ದೇವೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಪ್ರಾಂತೀಯ ಅಧ್ಯಕ್ಷ ಆನಂದ ರೈ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.

ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಜಗನ್ನಾಥ ರೈ, ಆಲಂಕಾರು ದುರ್ಗಾಂಬ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಪ್ರಶಾಂತಕುಮಾರ್ ರೈ ಮನವಳಿಕೆಗುತ್ತು, 2024-25ನೇ ಸಾಲಿನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಸುಂದರ ಗೌಡ, 2025-26ನೇ ಸಾಲಿನ ಕೋಶಾಧಿಕಾರಿ ಇಂದುಶೇಖರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಲಂಕಾರು ದುರ್ಗಾಂಬ ಲಯನ್ಸ್ ಕ್ಲಬ್ನ ಸ್ಥಾಪಕಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಾವು ಹೇಮನಾಥ ಶೆಟ್ಟಿಯವರ ಪ್ರೇರಣೆಯಿಂದ ಮೂರು ವರ್ಷದ ಹಿಂದೆ ಆರಂಭಗೊಂಡ ಆಲಂಕಾರು ದುರ್ಗಾಂಬ ಲಯನ್ಸ್ ಕ್ಲಬ್ ಗ್ರಾಮೀಣ ಪ್ರದೇಶದಲ್ಲಿ ಹಲವು ಸಾಮಾಜಿಕ ಚಟುವಟಿಕೆ ನಡೆಸಿದೆ. ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳಿದರು. 2025-26ನೇ ಸಾಲಿನ ಕಾರ್ಯದರ್ಶಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ ವಂದಿಸಿದರು. ಕಿರಣ್ ಪಜ್ಜಡ್ಕ ನಿರೂಪಿಸಿದರು. ಇಂದುಶೇಖರ ಶೆಟ್ಟಿ ಪ್ರಾರ್ಥಿಸಿದರು. ಹರಿದಾಸ್ ಭಟ್ ಆಲಂಕಾರು, ಸುಧಾಕರ ರೈ ಮನವಳಿಕೆ, ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.