ಪುತ್ತೂರು: ಪುರುಷರ ಮತ್ತು ಮಹಿಳೆಯರ ಸಿದ್ದ ಉಡುಪುಗಳಿಗೆ ಹೆಸರು ಗಳಿಸಿದ ವೈಟ್ ಟ್ಯಾಗ್ ಇದೀಗ ಆಷಾಡ ಪ್ರಯುಕ್ತ ಗ್ರಾಹಕರಿಗೆ ಭರಪೂರ ದರಕಡಿತ ಮಾರಾಟದ ಕೊಡುಗೆ ನೀಡಿದ್ದು ಇದಕ್ಕೆ ಗ್ರಾಹಕರಿಂದ ಭರ್ಜರಿ ಸ್ಪಂದನೆ ದೊರಕಿದೆ. ಪುತ್ತೂರು ಬಸ್ ನಿಲ್ದಾಣದ ಬಳಿ ಇರುವ ಮಳಿಗೆಯಲ್ಲಿ ಮಹಿಳೆಯರ ಉಡುಪುಗಳಿಗೆ 50.ಶೇ ದರ ಕಡಿತವಿದ್ದು ಈ ಹಿನ್ನೆಲೆಯಲ್ಲಿ ಡ್ರೆಸ್ ಮಳಿಗೆ ಮಹಿಳೆಯರಿಂದ ತುಂಬಿ ತುಳುಕಿದೆ, ತಮಗಿಷ್ಟವಾದ ಡ್ರೆಸ್ಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಳಿಗೆ ಫುಲ್ ರಶ್ ಆಗಿ ವ್ಯವಹಾರ ನಡೆಸುತ್ತಿದೆ.
ವಿವಿಧ ಕಂಪೆನಿಗಳ ಬ್ರಾಂಡೆಡ್ ಡ್ರೆಸ್ಗಳೂ ಅತೀ ಕಡಿಮೆ ಬೆಲೆಗೆ ಲಭ್ಯವಿದೆ. ಆಕರ್ಷಕ ಕುರ್ತಿ, ಸೆಲ್ವಾರ್ ಕಮಿಸ್, ಗೌನ್, ಸಹಿತ ನೂತನ ಶೈಲಿಯ ಚೂಡಿದಾರ ಬಟ್ಟೆಗಳು, ವಿವಿದ ಮೋಡೆಲ್ಗಳ ಪ್ಲಾಝ, ಲೆಹಂಗ, ಶರಾರ, ಜೀನ್ಸ್ ಪ್ಯಾಂಟ್, ಲೆಗ್ಗಿನ್ಸ್ ಸಹಿತ ನೂರಕ್ಕೂ ಮಿಕ್ಕ ಬಾಟಂ ವೆರೈಟಿಗಳು ಆಕರ್ಷಕ ಡಿಸೈನ್ಗಳ ನೈಟಿಗಳು ಅತೀ ಕಡಿಮೆ ಬೆಲೆಗೆ ಇಲ್ಲಿ ಲಭ್ಯವಿದೆ.
ಜಿ.ಎಲ್ ಮಾಲ್ನಲ್ಲಿರುವ ಪುರುಷರ ರೆಡಿಮೆಡ್ ಶೋರೂಂನಲ್ಲೂ ಅಮೋಘ ಆಫರ್ ಲಭ್ಯವಿದ್ದು ಅಲ್ಲಿಯೂ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಯಾವುದೇ ಎರಡು ಡ್ರೆಸ್ ಖರೀದಿ ಮಾಡಿದರೆ ಒಂದು ಡ್ರೆಸ್ ಉಚಿತವಾಗಿ ಪಡೆಯಬಹುದಾಗಿದೆ. ಕೆಲವು ಬ್ರಾಂಡ್ಗಳಲ್ಲಿ ಒಂದಕ್ಕೆ ಒಂದು ಉಚಿತವಾಗಿಯೂ ಲಭ್ಯವಿದೆ. ವರ್ಷದ ರಿಪ್ಲೆಸ್ಮೆಂಟ್ ಗ್ಯಾರಂಟಿಯೊಂದಿಗೆ ದೀರ್ಘ ಬಾಳಿಕೆಯ ನೂರಾರು ವೆರೈಟಿ ಬೆಲ್ಟ್ಗಳು, ಲಾಂಗ್ ಟೈಂ ಸುವಾಸನೆ ನೀಡಬಲ್ಲ ಪರ್ಫ್ಯುಂಗಳೂ ಲಭ್ಯವಿದೆ. ಸೀಮಿತ ಅವಧಿಯ ಈ ಅವಕಾಶವನ್ನು ಜನರು ಉಪಯೋಗಿಸಿಕೊಳ್ಳವಂತೆ ವೈಟ್ ಟ್ಯಾಗ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.