ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ವತಿಯಿಂದ ‘ಹೆಲ್ತೀ ಜಮಾತ್ ಅಭಿಯಾನ’

0

ಪುತ್ತೂರು: ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ಇದರ ವತಿಯಿಂದ ಜು.11ರಿಂದ ಜು.18ರ ವರೆಗೆ “ಹೆಲ್ತೀ ಜಮಾತ್” ಎಂಬ ಅಭಿಯಾನವನ್ನು ನಡೆಸಲಾಯಿತು. ಅಭಿಯಾನದಲ್ಲಿ ಜಮಾಅತ್‌ನ ಪ್ರತಿಯೊಂದು ಮನೆಗೆ ಸಸಿ ವಿತರಣೆ, ಪ್ರಬಂಧ ಸ್ಪರ್ದೆ, ಫೊಟೋಗ್ರಫಿ ಸ್ಫರ್ಧೆ ಹಾಗೂ ಜಾಗೃತಿ ಕಾರ್ಯಕ್ರಮಗಳು ನಡೆಯಿತು.


ಆರೋಗ್ಯದ ಮಹತ್ವ ಹಾಗೂ ಇಸ್ಲಾಮಿನಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ತಿಳಿಯಪಡಿಸುವ ಮೂಲಕ ಆರೋಗ್ಯಕರ ಸದೃಢ ಜಮಾಅತ್ ನಿರೂಪಿಸುವ ಉದ್ದೇಶದೊಂದಿಗೆ ಈ ಅಭಿಯಾನವನ್ನು ನಡೆಸಲಾಗಿದೆ ಎಂದು ಬದ್ರಿಯಾ ಗಲ್ಫ್ ಫ್ರೆಂಡ್ಸ್ ಅಧ್ಯಕ್ಷ ಸಾಬಿತ್ ಅಲಿ ಕಲ್ಲರ್ಪೆ ತಿಳಿಸಿದರು. “ಗ್ರೀನ್ ಗಿಫ್ಟ್ ಡೇ” ಎಂಬ ವಾಕ್ಯದೊಂದಿಗೆ ಜಮಾತ್‌ನ ಪ್ರತಿಯೊಂದು ಮನೆಗೆ ಸಸಿ ವಿತರಣೆ ನಡೆಸಲಾಯಿತು, ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಲತೀಫ್ ಹನೀಫಿ ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪರಿಸರ ಸಂರಕ್ಷಣೆಯ ಬಗ್ಗೆ, ಸಸಿ ನೆಡುವಿಕೆಯ ಬಗ್ಗೆ ಇಸ್ಲಾಂನಲ್ಲಿರುವ ಮಹತ್ವವನ್ನು ವಿವರಿಸಿದರು.

ಪ್ರಬಂಧ ಸ್ಪರ್ಧೆ ಫಲಿತಾಂಶ:
“ಆರೋಗ್ಯಕರ ಜಮಾತ್‌ನಲ್ಲಿ ನನ್ನ ಪಾತ್ರ” ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು ಅದರಲ್ಲಿ ಸಮದ್ ಝೆನಿತ್ ಪ್ರಥಮ ಹಾಗೂ ಸಫಾ ಕಲ್ಲರ್ಪೆ ದ್ವಿತೀಯ ಸ್ಥಾನ ಪಡೆದಿದ್ದು, ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಫೊಟೋಗ್ರಫಿ ಸ್ಪರ್ಧೆ:
ಗಲ್ಫ್ ಫ್ರೆಂಡ್ಸ್ ವತಿಯಿಂದ ಈ ಹಿಂದಿನ ವರ್ಷಗಳಲ್ಲಿ ಜಮಾತ್‌ನ ಮನೆಗಳಿಗೆ ನೀಡಿದ ಸಸಿಗಳನ್ನು ನೆಟ್ಟು ಬೆಳೆದಂತಹ ಗಿಡ, ಮರಗಳ ಫೊಟೋವನ್ನು ಕಳುಹಿಸಿಕೊಡುವಂತೆ ತಿಳಿಸಿದ್ದು, ಅದರಂತೆ ಹಲವಾರು ಮಂದಿ ಬೆಳೆದ ಗಿಡ, ಮರಗಳ ಫೊಟೋ ಕಳುಹಿಸಿದ್ದು, ಅವರಿಗೆಲ್ಲಾ ಅಭಿನಂದನಾ ಪತ್ರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಬದ್ರಿಯಾ ಜುಮಾ ಮಸೀದಿಯ ಸದರ್ ಮುಅಲ್ಲಿಮ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಮಸೀದಿ ಕಾರ್ಯದರ್ಶಿ ಹಮೀದ್ ಕಲ್ಲರ್ಪೆ, ಉಪಾಧ್ಯಕ್ಷರಾದ ಮಹಮ್ಮದ್ ಮಲಾರ್, ರಝಾಕ್ ಸಂಟ್ಯಾರ್, ಫಾರೂಕ್ ಸಂಟ್ಯಾರ್, ರಫೀಕ್ ಎಚ್.ಇ, ಜಲೀಲ್ ಮರಿಕೆ, ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸದಸ್ಯರಾದ ಮಹಮ್ಮದ್ ನೀರ್ಕಜೆ, ಇಕ್ಬಾಲ್ ಕಲ್ಲರ್ಪೆ, ಖಾದರ್ ಮರಿಕೆ ಹಾಗೂ ನಾಸಿರ್ ನೀರ್ಕಜೆ ಉಪಸ್ಥಿತರಿದ್ದರು. ಬದ್ರಿಯಾ ಗಲ್ಫ್ ಫ್ರೆಂಡ್ಸ್ ಜೊತೆ ಕಾರ್ಯದರ್ಶಿ ಅಝೀಝ್ ಕಲ್ಲರ್ಪೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here