ಪುತ್ತೂರು: ಕಲ್ಲಾರೆ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮತ್ತು ಪುತ್ತೂರು ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಪುತ್ತೂರು ಇವರ ಸಯುಕ್ತ ಆಶ್ರಯದಲ್ಲಿ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಸಭಾಭವನದಲ್ಲಿ ಆ.8 ರಂದು ನಡೆಯುವ 51ನೇ ವರ್ಷದ ಸಾಮೂಹಿಕ ಶ್ರೀ ವರ ಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರವನ್ನುಜು.21 ರಂದು ಶ್ರೀ ಮಠದಲ್ಲಿ ಬಿಡುಗಡೆಗೊಳಿಸಲಾಯಿತು.
ಶ್ರೀ ರಾಘವೇಂದ್ರ ಸ್ವಾಮಿ ಮಠದ ಅರ್ಚಕ ರಾಘವೇಂದ್ರ ಉಡುಪ ಅವರು ಶ್ರೀ ಗುರುರಾಯ ಮುಂದೆ ಪ್ರಾರ್ಥನೆ ಮಾಡಿ ಆಮಂತ್ರಣ ಬಿಡುಗಡೆಗೊಳಿಸಿದರು. ಈ ಸಂದರ್ಭ ಸಮಿತಿಯ ವೀಣಾ ಕೊಳತ್ತಾಯ, ಪ್ರೇಮಲತಾ ರಾವ್ ವತ್ಸಲಾರಾಜ್ಞಿ, ಮಲ್ಲಿಕಾ ಉಡುಪ, ಗೌರಿ ಬನ್ನೂರು, ರೂಪ ಕುದ್ಧಾಣ್ಣಯ, ಪ್ರೇಮ ಕೆಮ್ಮಾಯಿ, ಸುಧಾ, ವಿಜಯಲಕ್ಷ್ಮಿ, ಪದ್ಮಿನಿ, ವೀಣಾ ಶ್ರೀನಿವಾಸ್ ಭಟ್ ಉಪಸ್ಥಿತರಿದ್ದರು.