ಪುರುಷರಕಟ್ಟೆ ಗಣೇಶೋತ್ಸವದ ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ, ಚಪ್ಪರ ಮುಹೂರ್ತ

0

ಪುತ್ತೂರು:ಪುರುಷರಕಟ್ಟೆಯ ಶ್ರೀಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಯಲಿರುವ ಬೆಳ್ಳಿ ಹಬ್ಬದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಚಪ್ಪರ ಮುಹೂರ್ತವು ಜು.20ರಂದು ನೆರವೇರಿತು.


ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರದಾನ ಅರ್ಚಕ ರಾಧಾಕೃಷ್ಣ ಶಗ್ರಿತಾಯರವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು, ಗಣೇಶೋತ್ಸವದ ಕಾರ್ಯಕಾರಿ ಸಮಿತಿ ಅಧ್ಯಕ್ಷ ರವಿಕುಮಾರ್ ಎಂ ಮಾಯಾಂಗಲ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವದ ಬೆಳ್ಳಿ ಹಬ್ಬದ ಸಮಿತಿಯ ಅಧ್ಯಕ್ಷ ಉಮೇಶ್ ಎಂ. ಇಂದಿರಾನಗರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಮಿತಿಯ ಗೌರವಾಧ್ಯಕ್ಷರಾದ ವಸಂತ ಪೂಜಾರಿ ಕಲ್ಲರ್ಪೆ, ವಿಶ್ವನಾಥ ಪುರುಷ ಎಂ. ಸುರುಳಿಮಜಲು ಪುರುಷರಕಟ್ಟೆ, ರವೀಂದ್ರ ರೈ ನೆಕ್ಕಿಲು, ಪುರುಷರಕಟ್ಟೆ ರೈ ಸರ್ವಿಸ್ ಮಾಲಕ ವಸಂತ ರೈ ಚಪ್ಪರ ಮುಹೂರ್ತ ನೆರವೇರಿಸಿದರು.


ಗಣೇಶೋತ್ಸವ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ ಶ್ರೀನಿವಾಸ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಸಂತೋಷ್ ಎಂ. ಮುಕ್ವೆ, ಖಜಾಂಚಿ ರಾಘವೇಂದ್ರ ನಾಯಕ್, ಬೆಳ್ಳಿ ಹಬ್ಬ ಸಮಿತಿ ಖಜಾಂಚಿ ವಿಶ್ವನಾಥ್ ಬಲ್ಯಾಯ ಮುಂಡೋಡಿ, ಉಪಾಧ್ಯಕ್ಷರಾದ ನವೀನ್ ಪ್ರಭು ಬಜಪ್ಪಳ, ರವಿ ಕೊಡಿಮಜಲು, ಸಂಚಾಲಕರಾದ ಸುಬ್ರಮಣ್ಯ ಪೂಜಾರಿ ಪುರುಷರಕಟ್ಟೆ, ಸತೀಶ್ ಜೋಗಿ ಇಂದಿರಾನಗರ, ನರಿಮೊಗರು ಗ್ರಾ.ಪಂ. ಸದಸ್ಯರಾದ ನವೀನ್ ರೈ ಶಿಬಿರ , ವಿಜಯಲಕ್ಷ್ಮಿ ಕೂಡುರಸ್ತೆ, ನರಿಮೊಗರು ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಡಿ., ಉಪಾಧ್ಯಕ್ಷೆ ಪವಿತ್ರ ವೀರಮಂಗಲ, ದೇವಿ ಪ್ರಸಾದ್ ಪ್ರಭು ಉದಯ ಸ್ಟೋರ್, ಹರಿಶ್ಚಂದ್ರ ಜೋಗಿ ಮಾಯಾಂಗಲ, ಹೋಟೆಲ್ ಉದಯ ಭಾಗ್ಯ ಮಾಲಕ ದೇವಿಕಿರಣ್ ಪ್ರಭು, ಜಗದೀಶ್ ದೇವಾಡಿಗ ಸುರುಳಿಮಜಲು, ನವೀನ್ ಪೂಜಾರಿ ಸೇರಾಜೆ ಸಂತೋಷ ಇಂದಿರಾನಗರ, ಭವಿತ್ ಜೋಗಿ ಕೂಡುರಸ್ತೆ, ಪ್ರತಾಪ್ ಪೂಜಾರಿ ಇಂದಿರಾನಗರ, ಮಾಧವ ಇಂದಿರಾನಗರ, ಕೃಷ್ಣಪ್ಪ ಇಂದಿರಾನಗರ, ಜನಾರ್ದನ ಪೂಜಾರಿ ಕೊಡುರಸ್ತೆ, ಕೃಷ್ಣಪ್ಪ ಶೆಟ್ಟಿಮಜಲು, ದಿನೇಶ್ ಪೂಜಾರಿ ಇಂದಿರಾನಗರ ಸೇರಿದಂತೆ ಹಲವು ಮಂದಿ ಸದಸ್ಯರು ಹಾಗೂ ಭಕ್ತ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here