ಪುತ್ತೂರು: ಎಸ್.ಕೆ.ಎಸ್.ಎಸ್.ಎಫ್ ಇದರ ಪ್ರಧಾನ ಉಪ ಸಮಿತಿ ಸನ್ನದ್ದ ಸೇವಾ ವಿಭಾಗದ ವಿಖಾಯ ಸಮಿತಿ ಗ್ರಾಂಡ್ ಕಾನ್ಫರೆನ್ಸ್ ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್ ವಾಗನ್ ಟ್ರಾಜಿಡಿ ಹಾಲ್ನಲ್ಲಿ ನಡೆಯಿತು.
ಒಂದು ದಿನದ ಬೃಹತ್ ಕಾನ್ಫರೆನ್ಸ್ನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅದ್ಯಕ್ಷ ಸಯ್ಯಿದುಲ್ ಉಲಮಾ ಅಸ್ಸಯ್ಯಿದ್ ಜಿಫ್ರಿ ಮುತ್ತಕೋಯ ತಂಙಳ್ ಉದ್ಘಾಟಿಸಿದರು. ಬೆಳಿಗ್ಗೆ ಗಂಟೆ 9 ರಿಂದ ರಾತ್ರಿ 9 ರವರೆಗೆ ನಡೆದ ಕಾರ್ಯಾಗಾರದಲ್ಲಿ ಸಂಘಟನೆ, ಆಧ್ಯಾತ್ಮಿಕತೆ, ಸುನ್ನತ್ ಜಮಾಅತ್, ರಕ್ಷಣಾ ಕಾರ್ಯಾಚರಣೆ, ಆತ್ಮೀಯ ಸಂಗಮ ನಡೆಯಿತು.
1200 ಆಕ್ಟೀವ್ ವಿಂಗ್ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕುಂಬ್ರ ವಲಯ ಆಕ್ಟೀವ್ ವಿಂಗ್ ಸದಸ್ಯರಾದ ಮನ್ಸೂರ್ ಅಸ್ಲಮಿ ಅಮ್ಚಿನಡ್ಕ, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಶಕೀಲ್ ಅಹ್ಮದ್ ಬೇರಿಕೆ, ಹಾರಿಸ್ ತ್ಯಾಗರಾಜೆ, ರಫೀಕ್ ಮಾಡನ್ನೂರು, ಝಬೈರ್ ಮಾಡನ್ನೂರು, ಆಶಿಕ್ ಮುಂಡೋಳೆ, ಜುನೈದ್ ಮುಂಡೋಳೆ ಹಾಗೂ ದ. ಕ. ಈಸ್ಟ್ ಜಿಲ್ಲಾ ನಾಯಕರಾದ ಅಶ್ರಫ್ ಶೇಡಿಗುಂಡಿ, ಖಾದರ್ ಬಂಗೇರಕಟ್ಟೆ, ಇಬ್ರಾಹಿಂ ಕಡವ ಮೊದಲಾದವರು ಭಾಗವಹಿಸಿದ್ದರು.