ಪುತ್ತೂರು:ಕಥೋಲಿಕ್ ಸಭಾ ಮಂಗಳೂರು ಪ್ರದೇಶ, ಪುತ್ತೂರು ವಲಯದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಸಭಾಂಗಣದಲ್ಲಿ ಆದಿತ್ಯವಾರ ಜು.20 ರಂದು ನಡೆಯಿತು.
ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪ್ರಧಾನ ಧರ್ಮಗುರು ಹಾಗೂ ಉಪ್ಪಿನಂಗಡಿ ಕಥೋಲಿಕ್ ಸಭಾ ಘಟಕದ ಆತ್ಮೀಕ ಸಲಹೆಹಾರ ವಂ|ಜೆರಾಲ್ಡ್ ಡಿ’ಸೋಜ, ಕಥೋಲಿಕ್ ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷರಾದ ಎಲ್.ಜೆ ಫೆರ್ನಾಂಡೀಸ್, ಜೆರಾಲ್ಡ್ ಡಿ’ಕೋಸ್ಟ, ಸ್ಟ್ಯಾನಿ ಲೋಬೊ, ಕಥೋಲಿಕ್ ಸಭಾ ಪುತ್ತೂರು ವಲಯದ ನಿಕಟಪೂರ್ವ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಕಾರ್ಯದರ್ಶಿ ಅರುಣ್ ರೆಬೆಲ್ಲೋ, ಕಥೋಲಿಕ್ ಸಭಾ ಪುತ್ತೂರು ವಲಯದ ನೂತನ ಅಧ್ಯಕ್ಷ ಜೆರಾಲ್ಡ್ ಮಸ್ಕರೇನ್ಹಸ್, ಕಥೋಲಿಕ್ ಸಭಾ ಕೇಂದ್ರೀಯ ಕಾರ್ಯದರ್ಶಿ ವಿಲ್ಮಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಥೋಲಿಕ್ ಸಭಾ ಪುತ್ತೂರು ವಲಯದ ಕಳೆದ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದ ಶ್ರೀಮತಿ ಲವೀನಾ ಪಿಂಟೊರವರು ತನ್ನ ಅವಧಿಯಲ್ಲಿ ಕಥೋಲಿಕ್ ಸಭಾದ ಏಳಿಗೆಗೆ ಶ್ರಮಿಸಿದ ಆಯಾ ಚರ್ಚ್ ಘಟಕದ ಅಧ್ಯಕ್ಷರುಗಳನ್ನು ಗೌರವಿಸಲಾಗಿದ್ದು ಈ ನಿಟ್ಟಿನಲ್ಲಿ ಪುತ್ತೂರು ಮಾಯಿದೆ ದೇವುಸ್ ಚರ್ಚ್ ಘಟಕದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದ ಅರುಣ್ ಪಿಂಟೊ ಸಾಮೆತ್ತಡ್ಕ ಹಾಗೂ ಪ್ರೊ|ಝೇವಿಯರ್ ಡಿ’ಸೋಜ ಕೂರ್ನಡ್ಕರವರನ್ನು ಸಭೆಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಥೋಲಿಕ್ ಸಭಾ ಪುತ್ತೂರು ವಲಯದ ನಿಕಟಪೂರ್ವ ಅಧ್ಯಕ್ಷೆ ಲವೀನಾ ಪಿಂಟೊ ಸ್ವಾಗತಿಸಿ, ವಲಯ ಕಾರ್ಯದರ್ಶಿ ಪ್ರವೀಣ್ ಮಾಡ್ತಾ ವಂದಿಸಿದರು. ಕಥೋಲಿಕ್ ಸಭಾ ಪುತ್ತೂರು ವಲಯದ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ..
ಕಥೋಲಿಕ್ ಸಭಾ ಪುತ್ತೂರು ವಲಯದ ಪ್ರತಿಯೊಂದು ಕಾರ್ಯಕ್ರಮಗಳಿಗೆ ಉಪ್ಪಿನಂಗಡಿ ಚರ್ಚ್ ನಲ್ಲಿ ವೇದಿಕೆ ನೀಡಿ “ನಿಮ್ಮೊಂದಿಗೆ ನಾನಿದ್ದೇನೆ” ಎಂದು ಸದಾ ಪ್ರೋತ್ಸಾಹಿಸುವ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಧರ್ಮಗುರು ವಂ|ಜೆರಾಲ್ಡ್ ಡಿ’ಸೋಜ ಹಾಗೂ ಕಥೋಲಿಕ್ ಸಭಾ ಕೇಂದ್ರೀಯ ಪ್ರದೇಶ ಮಂಗಳೂರು ನೂತನ ಅಧ್ಯಕ್ಷ ಸಂತೋಷ್ ಡಿ’ಸೋಜರವರನ್ನು ಕಥೋಲಿಕ್ ಸಭಾ ಪುತ್ತೂರು ವಲಯದ ವತಿಯಿಂದ ಸನ್ಮಾನಿಸಲಾಯಿತು.