ಪುತ್ತೂರು: ಆರೆಲ್ತಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ಮಂತ್ರಿ ಮಂಡಲ ರಚಿಸಲಾಯಿತು.5 ನೇ ತರಗತಿಯ ಕುಶಾಲ್ ಪಿ.ಎ ಶಾಲಾ ನಾಯಕನಾಗಿ ಹಾಗೂ ಉಪನಾಯಕಿಯಾಗಿ 5ನೇ ತರಗತಿಯ ಫಾತಿಮತ್ ಅನ್ಸೀರಾ ಆಯ್ಕೆಯಾದರು.
ಮಂತ್ರಿಮಂಡಲದ ವಿವಿಧ ಖಾತೆಗಳನ್ನು ಹಂಚಲಾಯಿತು. ಮತ್ತು ವಿವಿಧ ಸಂಘಗಳನ್ನು ರಚಿಸಲಾಯಿತು. ರಕ್ಷಣಾ ಮಂತ್ರಿಯಾಗಿ ಸ್ವಫಾ ಫಾತಿಮಾ ಮತ್ತು ಉದಿತ್. ಕೆ.ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಫಾತಿಮತ್ ಸುಹೈಮ ಮತ್ತು ಧ್ಯಾನ್ ಪ್ರಸನ್ನ, ಸಾಂಸ್ಕೃತಿಕ, ಸಹಪಠ್ಯ, ವಾಚನಾಲಯ ಮಂತ್ರಿಯಾಗಿ ಅನ್ಸೀರಾ ಮತ್ತು ಹಿಮಾಶ್ರೀ, ವಿದ್ಯಾ ಮಂತ್ರಿಯಾಗಿ ಕುಶಾಲ್ ಮತ್ತು ಮಿಲನ್ ಕುಮಾರ್ ಸಿ.ಪಿ., ಶಿಸ್ತು ಮತ್ತು ನಲಿಕಲಿ ಭೌತಿಕ ಪರಿಸರ ಮಂತ್ರಿಯಾಗಿ ವಿಖ್ಯಾತ್ ಮತ್ತು ರಕ್ಷಾ.ಕೆ., ಕೃಷಿ ಮಂತ್ರಿಯಾಗಿ ಜಾನ್ವಿ, ಅಯನ್, ಶ್ರೇಯಾಂಶ್.,ಕ್ರೀಡಾ ಮಂತ್ರಿಯಾಗಿ ಅನ್ಸೀರಾ ಮತ್ತು ಸ್ವಫಾ ಫಾತಿಮ ಆಯ್ಕೆಯಾದರು.
ಮುಖ್ಯ ಗುರು ಶ್ರೀಕಾಂತ್ ನಾಯ್ಕ.ಎಂ. ಮಾರ್ಗ ದರ್ಶನ ನೀಡಿದರು. ಶಿಕ್ಷಕಿಯರಾದ ದಿವ್ಯ.ಪಿ ಮತ್ತು ರಮ್ಯ.ರೈ.ಕೆ. ಮಂತ್ರಿ ಮಂಡಲ ರಚನಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.