
ಕೌಡಿಚ್ಚಾರು: ಬಡಗನ್ನೂರು ಗ್ರಾಮದ ಪೆರಿಗೇರಿ ಸೇತುವೆ ಬಳಿ ಕಾರೊಂದು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಘಟನೆ ಜು.22ರಂದು ಮಧ್ಯಾಹ್ನ ನಡೆದಿದೆ.
ಪಟ್ಟೆ ಭಾಗದಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳದತ್ತ ನುಗ್ಗಿದ ಕಾರು ಅಲ್ಲಿದ್ದ ಮರವೊಂದಕ್ಕೆ ವಾಲಿ ನಿಂತಿದೆ. ಇದು ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆ ಸಿಬ್ಬಂದಿಯ ಕಾರು ಎಂದು ತಿಳಿದುಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಮರದ ರಕ್ಷಣೆ ಇಲ್ಲದಿದ್ದಲ್ಲಿ ಕಾರು ರಭಸವಾಗಿ ಹರಿಯುತ್ತಿರುವ ನೀರಿಗೆ ಬಿದ್ದು ಪ್ರಾಣಪಾಯ ಎದುರಾಗುವ ಸಾಧ್ಯತೆಯೂ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.