ಪುತ್ತೂರು: ಪುತ್ತೂರು ತಾಲೂಕು ಗಾಣಿಗ ಸಮುದಾಯ ಸಂಘದ ಅಧ್ಯಕ್ಷ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಮಾಜಿ ಸದಸ್ಯ ಹರಿರಾಮಚಂದ್ರರವರ ತಾಯಿ ನೀಲಮ್ಮ ಜು.23ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ 88 ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ಹರಿರಾಮಚಂದ್ರ, ಗೋಪಾಲಕೃಷ್ಣ, ಮೊಮ್ಮಕ್ಕಳಾದ ದೇವರಾಜ್, ಪ್ರೇಮ್ರಾಜ್, ದೀಪ್ತಿ, ಶಿವಾನಿ, ಕವನಶ್ರೀ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.