ಕೌಕ್ರಾಡಿ: ಪಿಟ್ಸ್ ಬಂದು ಪಾಲದಿಂದ ಕಾಲುಜಾರಿ ಕಣಿಗೆ ಬಿದ್ದು ವ್ಯಕ್ತಿ ಮೃತ್ಯು

0

ನೆಲ್ಯಾಡಿ: ಪಾಲದಲ್ಲಿ ನಡೆದುಕೊಂಡು ಹೋಗುವಾಗ ಪಿಟ್ಸ್ ಬಂದು ಆಕಸ್ಮಿಕವಾಗಿ ಪಾಲದಿಂದ ಕಾಲು ಜಾರಿ ಕಣಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟಕೆ ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ಜು.22ರಂದು ಮಧ್ಯಾಹ್ನ ನಡೆದಿದೆ.


ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ನಿವಾಸಿ ಮ್ಯಾಥ್ಯೂ ಯಾನೆ ವಿಜೇಶ್(45ವ.)ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರಿಗೆ ಪಿಟ್ಸ್ ಖಾಯಿಲೆಯಿದ್ದು ಮಣ್ಣಗುಂಡಿಯಲ್ಲಿ ತನ್ನ ಸ್ವಂತ ಮನೆಯಲ್ಲಿ ಕೆಲಸದವರಾದ ಮ್ಯಾಥ್ಯು ಸಿ.ಎಂ. ಮತ್ತು ಜೋಸೆಫ್‌ರವರೊಂದಿಗೆ ವಾಸವಾಗಿದ್ದರು. ಜು.22ರಂದು ಬೆಳಿಗ್ಗೆ ತೋಟಕ್ಕೆ ಹೋದವರು ತೋಟದ ಕಣಿಗೆ ಅಳವಡಿಸಿದ ಪಾಲದಲ್ಲಿ ನಡೆದುಕೊಂಡು ಹೋಗುವಾಗ ಪಿಟ್ಸ್ ಬಂದು ಆಕಸ್ಮಿಕವಾಗಿ ಪಾಲದಿಂದ ಕಾಲು ಜಾರಿ ಕಣಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.


ಮೃತ ವಿಜೇಶ್ ಅವರು ಪತ್ನಿ, ಓರ್ವ ಪುತ್ರ, ತಾಯಿ ನಿವೃತ್ತ ಮುಖ್ಯಶಿಕ್ಷಕಿ ಅನ್ನಮ್ಮ, ಸಹೋದರ ಪೊಲೀಸ್ ಹೆಡ್‌ಕಾನ್ಸ್‌ಸ್ಟೇಬಲ್ ವಿನೋದ್ ಅವರನ್ನು ಅಗಲಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here