ವಿಟ್ಲ: ಯುನೈಟೆಡ್ ಎಂಪರ್ಮೆಂಟ್ ಅಸೋಸಿಯೇಷನ್ ಇದರ ವಿಟ್ಲ ಝೋನ್ ನ ವಾರ್ಷಿಕ ಸದಸ್ಯರ ಸಭೆಯು ಇತ್ತೀಚೆಗೆ ಯುನೈಟೆಡ್ ಎಂಪರ್ಮೆಂಟ್ ಅಸೋಸಿಯೇಷನ್ ನ ರಾಜ್ಯ ಕಾರ್ಯದರ್ಶಿ ಇಂತ್ತಿಯಾಝ್ ಕಲ್ಲಡ್ಕರವರ ನೇತೃತ್ವದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಯುನೈಟೆಡ್ ಎಂಪರ್ಮೆಂಟ್ ಅಸೋಸಿಯೇಷನ್ ನ ರಾಜ್ಯ ಕಾರ್ಯದರ್ಶಿ ಶಾಕೀರ್ ಆಗಮಿಸಿದ್ದರು.
ಯುನೈಟೆಡ್ ಎಂಪರ್ಮೆಂಟ್ ಅಸೋಸಿಯೇಷನ್ ವಿಟ್ಲ ವಲಯಕ್ಕೆ ಆಯ್ಕೆ ಪ್ರಕ್ರಿಯೇ ನಡೆಯಿತು.ಗೌರವಾಧ್ಯಕ್ಷರಾಗಿ ಅಕ್ಟರ್ ಕಂಬಳಬೆಟ್ಟು, ಅಧ್ಯಕ್ಷರಾಗಿ ಶಫೀಕ್ ಎಂ. ಎಸ್., ಉಪಾಧ್ಯಕ್ಷರುಗಳಾಗಿ ಇಸ್ಟಾಲ್ ಶೀತಲ್, ಫಹಾದ್ ಕಂಬಳಬೆಟ್ಟು, ಶಾಫಿ ಸಾಲೆತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಪೊನ್ನೋಟು, ಜೊತೆ ಕಾರ್ಯದರ್ಶಿಗಳು ಜಲೀಲ್ ಮಂಗಿಲಪದವು, ಆಸೀಫ್ ಪೆರುವಾಯಿ, ಬಶೀರ್ ಬದಿಯಾರ್, ಲತೀಫ್ ಪುಣಚ, ಕೋಶಾಧಿಕಾರಿ ತೌಸೀಫ್ ಎಂ. ಜಿ., ಸಂಘಟನಾ ಕಾರ್ಯದರ್ಶಿ ಸಮದ್ ಮೇಗಿನಪೇಟೆ, ಇಂತಿಯಾಝ್ ಬೋಬೆಕ್ಕೆರಿ, ಹಂಝ ವಿ.ಕೆ.ಎಂ., ಮಾಧ್ಯಮ ಕಾರ್ಯದರ್ಶಿ ರಹೀಮ್ ಕುಂಡ್ಕಕ, ಶೀಫಾನ್ ಪುಣಚ, ಹರ್ಷದ್ ಕುಕ್ಕಿಲ, ಶಮೀರ್ ರವರನ್ನು ಆಯ್ಕೆ ಮಾಡಲಾಯಿತು.