ಪುತ್ತೂರು: ಕಡಬ ಗ್ರಾಮ ಪಂಚಾಯತಿನಿಂದ ಮೇಲ್ದರ್ಜೆಗೊಂಡು, ಹೊಸತಾಗಿ ಪಟ್ಟಣ ಪಂಚಾಯತ್ ಆಗಿ ಮಾರ್ಪಟ್ಟ, ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ, ಚುನಾವಣಾ ವೀಕ್ಷಕರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕೆ.ರವರು ನೇಮಕಗೊಳಿಸಿ ಆದೇಶಿಸಿರುತ್ತಾರೆ ಎಂದು ಡಿಕೆಡಿಸಿಸಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ತಿಳಿಸಿದ್ದಾರೆ.
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಚುನಾವಣಾ ವೀಕ್ಷಕರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮೊಹಮ್ಮದ್, ಸುಭಾಷ್ ಚಂದ್ರ ಶೆಟ್ಟಿ ಕುಲಾಲು, ಮಾಜಿ ಮೇಯರ್ ಮಹಾಬಲ ಮಾರ್ಲ ಮತ್ತು ಲಾರೆನ್ಸ್ ಡಿಸೋಜರನ್ನು ನೇಮಕಗೊಳಿಸಲಾಗಿದೆ.
ಕಡಬ ಪಟ್ಟಣ ಪಂಚಾಯತ್ ವಾರ್ಡ್ ವಿಕ್ಷಕರನ್ನಾಗಿ ಮೊಹಮ್ಮದ್ ಮೋನು ಪಾವೂರ್, ಎಮ್.ಬಿ.ವಿಶ್ವನಾಥ್ ರೈ ಪುತ್ತೂರು, ಉಲ್ಲಾಸ್ ಕೋಟ್ಯಾನ್, ಟಿ ಕೆ ಸುಧೀರ್, ಮ್ಯಾಥ್ಯು, ಸದಾಶಿವ ಉಳ್ಳಾಲ್, ಚಿತ್ತ ರಂಜನ್ ಶೆಟ್ಟಿ ಬೊಂಡಲ, ಕಿರಣ್ ಕುಮಾರ್ ಬುಡ್ಲೆ ಗುತ್ತು, ಇಬ್ರಾಹಿಂ ನವಾಜ್, ನವೀನ್ ಆರ್ ಡಿಸೋಜಾ, ಡಾಕ್ಟರ್ ರಾಜಾರಾಮ್ ಕೆಬಿ, ಗಿರೀಶ್ ಶೆಟ್ಟಿ ಕದ್ರಿ, ಯುಟಿ ತೌಸಿಫ್, ವಿಕಾಸ್ ಶೆಟ್ಟಿ, ಮಮತಾ ಗಟ್ಟಿ, ಸಬಿತ ಮಿಸ್ಕಿತ್, ಅನಿತಾ ಹೇಮನಾಥ್ ಶೆಟ್ಟಿ, ಪ್ರೇಮ್ ಬಲ್ಲಾಳಬಾಗ್, ಶುಭೋದಯ ಆಳ್ವ, ಶಾಲೆಟ್ ಪಿಂಟೊ, ಶಾಂತಲಾ ಗಟ್ಟಿ, ಅಪ್ಪಿ ಲತಾ ಕೆ, ದಿನೇಶ್ ಮೂಳುರ್ ಮತ್ತು ನಾರಾಯಣ ನಾಯ್ಕ್ ಇವರನ್ನು ವಿವಿಧ 13 ವಾರ್ಡ್ ಗಳಿಗೆ ನೇಮಕಗೊಳಿಸಲಾಗಿದೆ.
ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ನಾಮಪತ್ರ ಸಲ್ಲಿಕೆಯು ಜುಲೈ 29 ರಿಂದ ಆಗಸ್ಟ್ 5ರವರೆಗೆ ನಡೆಯಲಿದ್ದು, ಆಗಸ್ಟ್ 6ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಆಗಸ್ಟ್ 8ರಂದು ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಕೊನೆ ದಿನವಾಗಿರುತ್ತದೆ. ಕಡಬ ತಾಲ್ಲೂಕು ಘೋಷಣೆಗೊಂದ ನಂತರ, ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದ ಕಡಬ, ಪಟ್ಟಣ ಪಂಚಾಯಿತಿಗೆ ನಡೆಯುವ ಪ್ರಪ್ರಥಮ ಚುನಾವಣೆ ಇದಾಗಿರುತ್ತದೆ. ಈ ಚುನಾವಣೆಯನ್ನು ಎಲ್ಲಾ ರಾಜಕೀಯ ಪಕ್ಷದವರು ಪ್ರತಿಷ್ಠೆಯಾಗಿ ಪರಿಗಣಿಸಿರುತ್ತಾರೆ.