ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಮಂಗಳೂರು

0

ರೂ.606 ಕೋಟಿ ಠೇವಣಿ, ರೂ.521 ಕೋಟಿ ಸಾಲದೊಂದಿಗೆ ರೂ.1127 ಕೋಟಿ ಮೀರಿದ ವ್ಯವಹಾರ

ಪುತ್ತೂರು: ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ 31 ಶಾಖೆಗಳನ್ನು ಹೊಂದಿ ಕಾರ್ಯಾಚರಿಸುತ್ತಿರುವ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ 2025-26ನೇ ಸಾಲಿನ ಮೊದಲ ತ್ರೈಮಾಸಿಕ ಜೂ.30ರ ಅಂತ್ಯಕ್ಕೆ ರೂ.606 ಕೋಟಿ ಠೇವಣಿ ಮತ್ತು ರೂ.521 ಕೋಟಿ ಸಾಲದೊಂದಿಗೆ ರೂ.1127 ಕೋಟಿ ಒಟ್ಟು ವ್ಯವಹಾರವನ್ನು ದಾಖಲಿಸಿದೆ. ಜೂನ್ 2024ಕ್ಕೆ ಹೋಲಿಸಿದಾಗ, ಠೇವಣಿಯು ರೂ.69 ಕೋಟಿ ಹಾಗೂ ಸಾಲವು ರೂ.56 ಕೋಟಿ ಹೆಚ್ಚಳವಾಗಿ, ಒಟ್ಟು ವ್ಯವಹಾರದಲ್ಲಿ ರೂ.125 ಕೋಟಿ ವೃದ್ಧಿಯನ್ನು ಕಂಡಿದೆ.


ಸಂಘವು ದಿನಾಂಕ 30.06.2025 ಕ್ಕೆ ರೂ.2.60 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ, ಮತ್ತು ಒಟ್ಟು ಅನುತ್ಪಾದಕ ಆಸ್ತಿ ಹೊರಬಾಕಿ ಸಾಲದ ಶೇ.0.05ಕ್ಕೆ ಸೀಮಿತವಾಗಿದೆ ಹಾಗೂ ನಿವ್ವಳ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿದೆ. ಸಂಘವು 2025-26ನೇ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕ ಅವಧಿ 30.06.2025ಕ್ಕೆ ಸಾಧಿಸಿರುವ ಈ ಪ್ರಗತಿಯು ತೃಪ್ತಿದಾಯಕವಾಗಿದೆ. ಈ ತ್ರೈಮಾಸಿಕ ಅವಧಿಯ ಜೂನ್ ತಿಂಗಳಲ್ಲಿ 11 ದಿನಗಳ ಕಿರು ಅವಧಿಯಲ್ಲಿ ಸಂಘವು 4 ಹೊಸ ಶಾಖೆಗಳನ್ನು ಮತ್ತು 2 ವಿಸ್ತರಣಾ ಕೌಂಟರ್‌ಗಳನ್ನು ಆರಂಭಿಸಿ, ಸಹಕಾರ ರಂಗದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿರುವುದು. ಈ ಹಿಂದೆ 2021ರ ನವೆಂಬರ್ ತಿಂಗಳ ಮೊದಲ 7 ದಿನಗಳ ಕಿರು ಅವಧಿಯಲ್ಲಿ 5 ಹೊಸ ಶಾಖೆಗಳನ್ನು ಆರಂಭಿಸಿದ ಸಾಧನೆಯು ಇಲ್ಲಿ ಉಲ್ಲೇಖನೀಯ ಎಂದು ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈ

LEAVE A REPLY

Please enter your comment!
Please enter your name here