ಪುತ್ತೂರು: ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರ, ಬಾರಿಸು ಕನ್ನಡ ಡಿಂಡಿಮವ ಬಳಗದ ವತಿಯಿಂದ ದಿ|ಚಿದಾನಂದ ಕಾಮತ್ ಕಾಸರಗೋಡು ಇವರ 8ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ದಿ|ಚಿದಾನಂದ ಕಾಮತ್ ಅವರ ಪತ್ನಿ ಅನಿತಾ ಕಾಮತ್ ರವರ ಪರ್ಲಡ್ಕ “ಕಲಾಸ್ಪೂರ್ತಿ” ಮನೆಯಲ್ಲಿ ನಡೆಯಿತು.
ನಾರಾಯಣ ರೈ ಕುಕ್ಕುವಳ್ಳಿ ಉಪಸ್ಥಿತರಿದ್ದು, ಕಾಮತ್ ರವರ ಒಡನಾಟ, ಅವರ ಸಾಂಸ್ಕೃತಿಕ ಹಾಗೂ ಕಲಾಸೇವೆಯ ಕುರಿತು ಗುಣಗಾನ ಮಾಡಿ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಕಲಾಕೇಂದ್ರದ ವತಿಯಿಂದ ಕೊಂಬೆಟ್ಟು ಸರ್ಕಾರಿ ಪ್ರೌಢಶಾಲೆಯಲ್ಲಿ SSLC ಪರೀಕ್ಷೆಯಲ್ಲಿ 625 ದಿಲ್ಲಿ 610 ಅಂಕ ಪಡೆದು ಪ್ರಸ್ತುತ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವೈಭವ್ ಪೂಜಾರಿ ಇವರಿಗೆ ರೂ.15000/-ಧನ ಸಹಾಯ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲಾಕೇಂದ್ರದ ಅಧ್ಯಕ್ಷೆ ವಸಂತಿ ಆರ್.ಐತಾಳ್, ನಾರಾಯಣ ಕುಕ್ಕುಪುಣಿ, ರಾಮಚಂದ್ರ, ಶೀಲಾ ಜಯರಾಮ್ ಬಡಾವು ಉಷಾ ನಾರಾಯಣ ಮತ್ತು ಅನಿತಾ ಕಾಮತ್ ಉಪಸ್ಥಿತರಿದ್ದು, ನುಡಿನಮನದೊಂದಿಗೆ ಪುಷ್ಪನಮನ ಸಲ್ಲಿಸಿದರು. ಸುದರ್ಶನ್ ಗೌಡ ಮುರ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಅನಿತಾ ಕಾಮತ್ ಕಾರ್ಯಕ್ರಮದ ಪೂರ್ತಿ ಉಸ್ತುವಾರಿ ವಹಿಸಿದ್ದರು.