ಪುತ್ತೂರು: ಕೆನರಾ ಬ್ಯಾಂಕ್ ರೀಜನಲ್ ಆಫೀಸು ಪುತ್ತೂರು ಹಾಗೂ ರೋಟರಿ ಕ್ಲಬ್ ಪುತ್ತೂರು ಸಿಟಿ ಜಂಟಿ ಆಶ್ರಯದಲ್ಲಿ ರಕ್ತದಾನ ಮಾಡಿ, ಜೀವ ಉಳಿಸಿ ಧ್ಯೇಯ ವಾಕ್ಯದಡಿ ಜು.25 ರಂದು ಬೆಳಿಗ್ಗೆ ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ನ ಮೆಡಿಕಲ್ ಆಫೀಸರ್ ಡಾ.ಸೀತಾರಾಮ್ ಭಟ್ ರವರು ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿ ಪ್ರತಿಯೋರ್ವರೂ ರಕ್ತದಾನ ಮಾಡಿದಾಗ ಮೂವರ ಜೀವ ಉಳಿಸಿದಂತಾಗುತ್ತದೆ ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತದೆ ಎಂದರು.
ಗೌರವ ಅತಿಥಿಯಾಗಿ ಪುತ್ತೂರು ಕೆನರಾ ಬ್ಯಾಂಕ್ ರೀಜನಲ್ ಆಫೀಸ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಂಜನ್ ಕುಮಾರ್, ಡಿವಿಷನಲ್ ಮ್ಯಾನೇಜರ್ ಅಜಿತ್ ಕುಮಾರ್, ಸೀನಿಯರ್ ಮ್ಯಾನೇಜರ್ ಗಳಾದ ಉಮಾನಾಥ್ ಕುಲಾಲ್, ಅರ್ನಾಬ್ ಸೀನಿಯರ್ ಮ್ಯಾನೇಜರ್ ಗಳು, ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈ. ರೋಟರಿ ಸಿಟಿಯ ಜಿ.ಸುರೇಂದ್ರ ಕಿಣಿ, ಜಯಕುಮಾರ್ ರೈ ಎಂ.ಆರ್, ರಾಮಚಂದ್ರ ಬನ್ನೂರು, ಗುರುರಾಜ್, ವಿಕ್ಟರ್ ಮಾರ್ಟಿಸ್, ಕಾರ್ತಿಕ್ ರೈ, ಪ್ರಜ್ವಲ್ ಪೈ ಕ್ಯಾಂಪ್ಕೋ, ಅನ್ವಿತ್ ಉಪಾಧ್ಯಾಯ ಸಹಿತ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಡಾ.ಸೀತಾರಾಮ ಭಟ್, ಕೆನರಾ ಬ್ಯಾಂಕ್ ರೀಜನಲ್ ಆಫೀಸ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಂಜನ್ ಕುಮಾರ್, ರೋಟರಿ ಸಿಟಿ ಅಧ್ಯಕ್ಷ ಉಲ್ಲಾಸ್ ಪೈರವರುಗಳನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು. ಬ್ಲಡ್ ಬ್ಯಾಂಕ್ ನ ಸಜಿನಿ ಮಾರ್ಟಿಸ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳು ಸಹಕರಿಸಿದರು.