ಪುತ್ತೂರು: ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚಸುತ್ತಿರುವ ಅಕ್ಷಯ ಕಾಲೇಜಿನಲ್ಲಿ “ಎಲೈಟ್” ಇಂಟೀರಿಯರ್ ಡಿಸೈನ್ ಅಸೋಸಿಯೇಷನ್ ಹಾಗೂ ಐಕ್ಯೂಎಸಿ ಸಹಭಾಗಿತ್ವದಲ್ಲಿ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ “ಮಾನವೀಯ ಮೌಲ್ಯಗಳು” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರ ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿ, ಅಕ್ಷಯ ಕಾಲೇಜಿನ ಐಕ್ಯೂಎಸಿ ಇದರ ಸಂಯೋಜಕಿ ಹಾಗೂ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ರಶ್ಮಿ ಕೆ. ಮಾತನಾಡಿ, ಶಿಸ್ತುಬದ್ಧ ಜೀವನ, ಗೌರವ ನೀಡುವುದು, ಪ್ರೀತಿ, ವಿಶಾಲ ಮನೋಭಾವನೆ, ವ್ಯಕ್ತಿತ್ವದಲ್ಲಿ ಸ್ಥಿರತೆ, ಸಂತೋಷದ ಜೀವನ,ನಿರ್ಧಾರದಲ್ಲಿ ಸ್ವಂತಿಕೆ ಈ ಎಲ್ಲಾ ಮೌಲ್ಯಗಳನ್ನು ಯಾವ ರೀತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಈ ಮೌಲ್ಯಗಳು ಜೀವನದಲ್ಲಿ ಎಷ್ಟು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಚಟುವಟಿಕೆಗಳ ಮೂಲಕ ವಿವರಿಸಿದರು.
ಈ ಕಾರ್ಯಾಗಾರದಲ್ಲಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ, ಆಡಳಿತ ಅಧಿಕಾರಿ ಅರ್ಪಿತ್ ಟಿ. ಎ. , ಇಂಟೀರಿಯರ್ ಡಿಸೈನ್ ವಿಭಾಗದ ಉಪನ್ಯಾಸಕಿಯರಾದ ಕಾವ್ಯ ಹಾಗೂ ಶ್ರದ್ಧಾ, ವಾಣಿಜ್ಯ ವಿಭಾಗದ ಉಪನ್ಯಾಸಕ ಕಿಶನ್ ಎನ್ ರಾವ್ ಉಪಸ್ಥಿತರಿದ್ದರು.ಇಂಟೀರಿಯರ್ ಡಿಸೈನ್ ವಿಭಾಗದ ಮುಖ್ಯಸ್ಥ ರಕ್ಷಣ ಟಿ. ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದ ನಿರೂಪಣೆ, ಸ್ವಾಗತ, ಪ್ರಾರ್ಥನೆ ಹಾಗೂ ಧನ್ಯವಾದಗಳನ್ನು ನಡೆಸಿಕೊಟ್ಟರು.