ಪುತ್ತೂರು: ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ ಮತ್ತು ಪುತ್ತೂರು ತಾಲೂಕು ಸಹಕಾರದೊಂದಿಗೆ ಸುದಾನ ವಸತಿಯುತ ಶಾಲೆಯಲ್ಲಿ ಮಕ್ಕಳಿಗೆ ಮತ್ತು ಮಕ್ಕಳ ಪೋಷಕರಿಗೆ ಪೋಕ್ಸೋ, ಹದಿಹರೆಯದ ಮತ್ತು ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.
ಪಡಿ ಸಂಸ್ಥೆ ಮಂಗಳೂರು ಇದರ ಕಾರ್ಯನಿರ್ವಹಣಾಧಿಕಾರಿ ರೆನ್ನಿ ಡಿಸೋಜ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮಕ್ಕಳ ಶಿಕ್ಷಣ ಅಧಿಕಾರಿ ವಝೀರ್ ಮಾಹಿತಿ ಕಾರ್ಯಕ್ರಮ ನಡೆಸಿದರು. ತಾಲೂಕಿನ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮಹಮ್ದ್ ರಫೀಕ್, ಸುದಾನ ಶಾಲೆಯ ಸಂಚಾಲಕ ರೇ ವಿಜಯ ಹಾರ್ವಿನ್, ಶಾಲಾ ಸುರಕ್ಷ ಸಮಿತಿಯ ಅಧ್ಯಕ್ಷ ಮಾಮಚ್ಚನ್ ಮಾತನಾಡಿದರು. ಸುದಾನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ವಿನಿತಾ, ಉಪಾಧ್ಯಕ್ಷ ಪ್ರಮೋದ್ ಕುಮಾರ್, ಶಿಕ್ಷಣ ಸಂಪನ್ಮೂಲ ಕೆಂದ್ರದ ಸದಸ್ಯೆ ವಕೀಲೆ ರಾಜೇಶ್ವರಿ ಉಪಸ್ಥಿತರಿದ್ದರು. ಸುದಾನ ವಸತಿ ಶಾಲಾ ಮುಖ್ಯ ಗುರು ಶೋಭಾ ನಾಗರಾಜ್ ಸ್ವಾಗತಿಸಿ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ನಯನ ರೈ ವಂದಿಸಿದರು. ಸಹ ಶಿಕ್ಷಕಿ ಶ್ಯಾಮಲ ಬಂಗೇರ ಕಾರ್ಯಕ್ರಮ ನಿರೂಪಿಸಿದರು.