ಬುರೂಜ್ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಶಬನಾ ಮನ್ಸೂರ್ ಆಯ್ಕೆ

0
  • ಪುತ್ತೂರು:ರಝಾನಗರ ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಶಾಲಾ ಶಿಕ್ಷಕ ರಕ್ಷಕ ಸಂಘದ ನೂತನಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

  • ಈ ಸಭೆಯ ಅಧ್ಯಕ್ಷತೆಯನ್ನು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ವಹಿಸಿದ್ದರು.ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಶಬಾನಾ ಮನ್ಸೂರ್ ಎನ್. ಸಿ ರೋಡ್, ಗೌರವಧ್ಯಕ್ಷರಾಗಿ ಅಬ್ದುಲ್ ಅಝೀಝ್, ಉಪಾಧ್ಯಕ್ಷರಾಗಿ ವಲೇರಿಯನ್ ಲಸ್ರಾದೋ, ಮಹಿಳಾ ಉಪಾಧ್ಯಕ್ಷೆಯಾಗಿ ನಿಶಿತಾ ಕೋಶಾಧಿಕಾರಿಯಾಗಿ ಜಯರಾಜ್ ಶೆಟ್ಟಿ ದಂಡೆಗೋಳಿ, ಕಾರ್ಯದರ್ಶಿಯಾಗಿ ಜಯಶ್ರೀ ಸಾಲ್ಯಾನ್, ಜೊತೆ ಕಾರ್ಯದರ್ಶಿಯಾಗಿ ಡೋರೆಸ್ ಪಿಂಟೋ ಆಯ್ಕೆಯಾದರು. ಶಿಕ್ಷಕ ರಕ್ಷಕ ಸಂಘದ ನೂತನಾ ಪದಾಧಿಕಾರಿಗಳ ಆಯ್ಕೆ ಪ್ರಕಿಯೆಯನ್ನು ಚಂದ್ರಾವತಿ ನೆರವೇರಿಸಿದರು.

ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಧ್ಯಕ್ಷ ,ಉಪಾಧ್ಯಕ್ಷೆ ಮತ್ತು ಕೋಶಾಧಿಕಾರಿಯನ್ನು ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ಶ್ಲಾಘಿಸಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆಯಾದ ರಝೀಯ ಎಸ್. ಪಿ ,ಮುಖ್ಯ ಶಿಕ್ಷಕಿಯಾದ ಜಯಶ್ರೀ ಸಾಲ್ಯಾನ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಎಲ್ಸಿ ಲಸ್ರಾದೊ, ಶಾಲಾ ನಾಯಕಿ ಸನಾ ಶೆಟ್ಟಿ ಉಪಸ್ಥಿತರಿದ್ದರು. ಶೇಖ್ ಜಲಾಲುದ್ದೀನ್ ಸ್ವಾಗತಿಸಿ, ಸಪ್ನಾಝ್ ವಂದಿಸಿ, ದಿವ್ಯ, ಹಾಫಿಳಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here