ಪುತ್ತೂರು: “ಹುಟ್ಟಿದ ಪ್ರತಿ ಮಗುವನ್ನು ವೀರ ಯೋಧನನ್ನಾಗಿ ಮಾಡುವುದೇ ನಮ್ಮ ಧ್ಯೇಯವಾಗಬೇಕು. ಕಾರ್ಗಿಲ್ ದಿನ ಅಂದರೆ ಹುತಾತ್ಮ ಯೋಧರಿಗೆ ನಾವು ಮಾಡುವ ನಮನ ವಾಗಿದೆ ” ಎಂದು ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಗುರು ರಾಜೇಶ್ ನೆಲ್ಲಿತ್ತಡ್ಕ ಹೇಳಿದರು.
ಅವರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಯಾದವಶ್ರೀ ಸಭಾಂಗಣದಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ವೀರ ಯೋಧ ರಾದ ಸೌರಭ್ ಖಾಲಿಯಾ, ಯೋಗೇಂದ್ರ ಸಿಂಗ್, ವಿಕ್ರಂ ಭಾತ್ರ ಮೊದಲಾದ ವರ ವೀರ ಹೋರಾಟ ದಿಂದ ನಾವು ಕಾರ್ಗಿಲ್ ನ್ನು ಮರಳಿ ಪಡೆದಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತಾಡಿದ ಶಾಲಾ ಆಡಳಿತ ಮಂಡಳಿ ಸದಸ್ಯ ಚಂದ್ರಶೇಖರ್ ವಿದ್ಯಾರ್ಥಿಗಳು ದೇಶ ಭಕ್ತಿ ಯನ್ನು ಮೈಗೂಡಿಸಿ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕು, ಭ್ರಷ್ಟಾಚಾರ ಮುಕ್ತ ಭಾರತವನ್ನು ಮಾಡುವುದೇ ನಮ್ಮ ಗುರಿ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ, ಸಂಧ್ಯಾ, ಮಮತಾ ಉಪಸ್ಥಿತರಿದ್ದರು. ಕ್ಷಮಾ ಜೆ ರೈ ಸ್ವಾಗತಿಸಿ, ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ವೈಷ್ಣಿ ಹಾಗೂ ಅತಿತ್ ರೈ ನಿರೂಪಿಸಿದರು. ಶಿಕ್ಷಕರು ಸಹಕರಿಸಿದರು.