ಪುತ್ತೂರು: ಏಕಾಏಕಿ ಬೀಸಿದ ಭಾರಿ ಗಾಳಿಗೆ ಮರದ ಗೆಲ್ಲೊಂದು ಮುರಿದು ಬಿದ್ದು ಹಟ್ಟಿ ಹಾಗೂ ಮನೆಗೆ ಹಾನಿಯುಂಟಾದ ಘಟನೆ ಜು.26ರಂದು ಸಂಜೆ ಒಳಮೊಗ್ರು ಗ್ರಾಮದ ಕೇರಿ ಎಂಬಲ್ಲಿ ನಡೆದಿದೆ. ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ರೈ ಕೇರಿ ಎಂಬವರ ಹಟ್ಟಿಗೆ ಮರದ ಗೆಲ್ಲೊಂದು ಮುರಿದು ಬಿದ್ದು ಹೆಂಚು ಪಕ್ಕಾಸಿಗೆ ಹಾನಿಯಾಗಿದೆ. ಮನೆಯ ಒಂದು ಭಾಗದ ಹೆಂಚು ಜಾರಿದ್ದು ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
