ಅಂಕತಡ್ಕ: ಪ್ರವೀಣ್ ನೆಟ್ಟಾರು ಸಂಸ್ಮರಣೆ ,ಪುಷ್ಪಾರ್ಚನೆ

0

ಸವಣೂರು: ಪಾಲ್ತಾಡಿ ಗ್ರಾಮದ ಅಂಕತಡ್ಕದಲ್ಲಿರುವ ದಿ.ಪ್ರವೀಣ್ ನೆಟ್ಟಾರು ಸ್ಮಾರಕ ವೀರ ಸಾವರ್ಕರ್ ವೃತ್ತದಲ್ಲಿ ದಿ‌.ಪ್ರವೀಣ್ ನೆಟ್ಟಾರು ಅವರ ಪುಣ್ಯತಿಥಿಯ ಅಂಗವಾಗಿ ಬಿಜೆಪಿ ಪಾಲ್ತಾಡಿ ಶಕ್ತಿಕೇಂದ್ರ ಬೂತ್ 70-71ರ ವತಿಯಿಂದ ಪ್ರವೀಣ್ ನೆಟ್ಟಾರು ಸಂಸ್ಮರಣೆ ಜು.26ರಂದು  ಮಾಡಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ‌ ಅವರು ಪುಷ್ಪಾರ್ಚಣೆ ಮಾಡಿ ಮಾತನಾಡಿ, ಧ್ಯೇಯನಿಷ್ಠ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬಲಿದಾನವನ್ನು ನಾವು ಸದಾ ಸ್ಮರಿಸಬೇಕು. ಅಗಲಿದ ಕಾರ್ಯಕರ್ತನ ಸ್ಮರಣೆಗಾಗಿ ಸ್ಮಾರಕ ನಿರ್ಮಿಸಿದ ಪಾಲ್ತಾಡಿಯ ಜನತೆಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ರವೀಂದ್ರ ಶೆಟ್ಟಿ ಉಳಿದೊಟ್ಟು,ಪ್ರಧಾನ ಕಾರ್ಯದರ್ಶಿ ಯತೀಶ್ ಅರುವಾರ,ಬಿಜೆಪಿ ಸುಳ್ಯ ಮಂಡಲ ಕಾರ್ಯದರ್ಶಿ ಗಣೇಶ ಉದನಡ್ಕ,ಪುತ್ತೂರು ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ,ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ,ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್., ಸದಸ್ಯರಾದ ವಿನೋದಾ ರೈ ಚೆನ್ನಾವರ, ಭರತ್ ರೈ ,ಬೂತ್ 70 ರ ಅಧ್ಯಕ್ಷ, ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಬೂತ್ 71ರ ಅಧ್ಯಕ್ಷ ಶಿವಾನಂದ,ಸವಣೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಚೆನ್ನಾವರ ಅಭ್ಯುದಯ ಯುವಕ ಮಂಡಲದ ಅಧ್ಯಕ್ಷ ಪುಟ್ಟಣ್ಣ ನಾಯ್ಕ, ರಿಕ್ಷಾ ಚಾಲಕ ಮಾಲಕ ಸಂಘದ ಚಂದ್ರಹಾಸ ,ಆಶೀತ್ ರೈ ಕುಂಜಾಡಿ,ದಯಾಕರ ಕುಂಜಾಡಿ,ಸುಂದರ ,ದೀಕ್ಷಿತ್, ಸಮೃದ್ದಿ ಕಿಶೋರ್ ಕುಮಾರ್ ಎಂ.ಡಿ.,ಸುರೇಶ್ ಬಂಬಿಲದೋಳ,ಸುಂದರ ಬಿ.ಎಂ,ಜಯಪ್ರಶಾಂತ್ ,ರಾಜೇಶ್ ಪಾಲ್ತಾಡಿ, ಸಂದೀಪ್  ಮೊದಲಾದವರಿದ್ದರು.

LEAVE A REPLY

Please enter your comment!
Please enter your name here