ಕುಂಬ್ರ: ಬಿಜೆಪಿಯಿಂದ ಕೆದಂಬಾಡಿ ಶಕ್ತಿ ಕೇಂದ್ರದಲ್ಲಿ ದೇಶದ ಮೊದಲ ಅಭ್ಯಾಸ ವರ್ಗ 

0

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಇದರ ವತಿಯಿಂದ ದೇಶದ ಮೊದಲ ಶಕ್ತಿ ಕೇಂದ್ರದ ಅಭ್ಯಾಸ ವರ್ಗ ಕೆದಂಬಾಡಿ ಶಕ್ತಿ ಕೇಂದ್ರದಲ್ಲಿ ನಡೆಯಿತು.ಅಭ್ಯಾಸ ವರ್ಗವು ಕುಂಬ್ರ ಅಕ್ಷಯ ಮಿನಿಹಾಲ್ ನಲ್ಲಿ ನಡೆಯಿತು. ಅಭ್ಯಾಸ ವರ್ಗದ ಉದ್ಘಾಟನೆಯನ್ನು ಹಿರಿಯ ಕಾರ್ಯಕರ್ತರಾದ ಶಂಕರನಾರಾಯಣ ಭಟ್ ರವರು ನೆರವೇರಿಸಿದರು.ಮಂಗಳೂರು ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಪ್ರೇರಣೆಯ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್ ಶುಭಾಶಯದ ಮಾತುಗಳನ್ನಾಡಿದರು. ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ನರಿಮೊಗರು ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸತೀಶ್ ಪಾಂಬಾರು, ಕೆದಂಬಾಡಿ ಶಕ್ತಿಕೇಂದ್ರ ಪ್ರಮುಖ್ ಶರತ್ ಗುತ್ತು ಉಪಸ್ಥಿತರಿದ್ದರು. ಅಭ್ಯಾಸ ವರ್ಗದ ಮೊದಲ ಅವಧಿಯನ್ನು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ ರವರು ನಡೆಸಿಕೊಟ್ಟರು.

ಈ ಅವಧಿಯಲ್ಲಿ ನಮ್ಮ ಪೈಚಾರಿಕತೆ ಮತ್ತು ಪಂಚ ಪರಿವರ್ತನೆ ಎಂಬ ವಿಚಾರದ ಬಗ್ಗೆ ತಮ್ಮ ವಿಚಾರಗಳನ್ನು ಕಾರ್ಯಕರ್ತರಿಗೆ ಮನಮುಟ್ಟುವಂತೆ ವಿವರಿಸಿದರು.

ಎರಡನೇ ಅವಧಿಯನ್ನು ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಅವರು  ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದಲ್ಲಿ ನಮ್ಮ ಪಾತ್ರ ಎಂಬ ವಿಚಾರದ ಬಗ್ಗೆ ಶಿಕ್ಷಣವನ್ನು ನೀಡಿದರು.

ಮೂರನೇ ಅವಧಿಯಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು ರವರು ವಿಕಸಿತ ಭಾರತದ ಅಮೃತಕಾಲ – ನಮ್ಮ ಸಕ್ರಿಯತೆ ಎಂಬ ವಿಚಾರದ ಬಗ್ಗೆ ತಮ್ಮ ವಿಚಾರಗಳನ್ನು ಮಂಡಿಸಿದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲರವರು ದೇಶದಲ್ಲಿ ನಡೆಯುತ್ತಿರುವ ಮೊದಲ ಶಕ್ತಿ ಕೇಂದ್ರದ ಅಭ್ಯಾಸ ವರ್ಗ ಇದಾಗಿದ್ದು ನೀವೆಲ್ಲರೂ ದೇಶಕ್ಕೆ ಮಾದರಿಯಾಗಿದ್ದೀರಿ ಕೆದಂಬಾಡಿ ಗ್ರಾಮದಲ್ಲಿ ಕಾರ್ಯಕರ್ತರು ಇಷ್ಟೊಂದು ಸಂಘಟಿತರಾಗಿರುವುದಕ್ಕೆ ಇದು ಸಾಕ್ಷಿ ಪುತ್ತೂರಿನ ಸಂಘಟನೆಗೆ ದೊಡ್ಡ ಇತಿಹಾಸವಿದೆ ಅದನ್ನು ಮರು ರಚಿಸುವತ್ತ ಇದು ಮೊದಲ ಹೆಜ್ಜೆ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಜಿಲ್ಲಾ ಪ್ರಶಿಕ್ಷಣ ವರ್ಗ ಸಂಚಾಲಕರಾದ ಸುಧಾಕರ ಆಚಾರ್ಯ, ಕೆದಂಬಾಡಿ ಶಕ್ತಿ ಕೇಂದ್ರ ಪ್ರಮುಖ್ ಶರತ್ ಗುತ್ತು ಉಪಸ್ಥಿತರಿದ್ದರು.

ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯದರ್ಶಿ ರತನ್ ರೈ ಕುಂಬ್ರ, ಪ್ರಶಿಕ್ಷಣ ವರ್ಗ ಶಕ್ತಿಕೇಂದ್ರ ಪ್ರಭಾರಿ ವಿಜಯಕುಮಾರ್ ರೈ ಕೋರಂಗ  ಸಹಕಾರವನ್ನು ನೀಡಿದರು.

ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದಿಂದ ಪ್ರಶಿಕ್ಷಣ ವರ್ಗ ಸಂಚಾಲಕರಾದ ವಿರೂಪಾಕ್ಷ ಭಟ್ ಮಚ್ಚಿಮಲೆ, ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಯತೀಂದ್ರ ಕೊಚ್ಚಿ, ಪುತ್ತೂರು ಮಹಿಳಾ ಮಂಡಲ ಕೋಶಾಧಿಕಾರಿ ಗೀತಾ ಸತೀಶ್ ರೈ ಗುತ್ತು, ಪುತ್ತೂರು ಬಿಜೆಪಿಯ ಹಿರಿಯ ನಾಯಕರಾದ ಸುಭಾಷ್ ರೈ ಕಡಮಜಲು, ಕೆದಂಬಾಡಿ ಶಕ್ತಿಕೇಂದ್ರದ ಹಿರಿಯರಾದ ರಾಜೀವ ರೈ ಕೋರಂಗ, ಶಿವರಾಮ ಗೌಡ ಇದ್ಯಪೆ, ಗಣಪತಿ ಭಟ್, ಕರುಣಾಕರ ರೈ ಅತ್ರೆಜಾಲು, ಜಯರಾಮ ರೈ ಬಾಲಯ ಸಹಕಾರ ಭಾರತಿ ಪುತ್ತೂರು ಇದರ ಅಧ್ಯಕ್ಷರಾದ ಕೃಷ್ಣಕುಮಾರ್ ರೈ ಗುತ್ತು, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಉಪಾಧ್ಯಕ್ಷೆ ಜಯಲಕ್ಷ್ಮಿ ಬಲ್ಲಾಳ್, ಕೆದಂಬಾಡಿ ಒಂದನೆ ಬೂತ್ ನ ಬಿಜೆಪಿ ಅಧ್ಯಕ್ಷರಾದ ಮೋಹನ್ ಆಳ್ವ ಮುಂಡಾಲಗುತ್ತು, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಮುಂಡಾಲ, ಎರಡನೇ ಬೂತ್ ಅಧ್ಯಕ್ಷರಾದ ನೇಮಿರಾಜ ರೈ ಕುರಿಕ್ಕಾರ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಗೌಡ ಇದ್ಯಪೆ, ಮೂರನೇ ಬೂತ್ ಅಧ್ಯಕ್ಷರಾದ ಅಮರ್ ರೈ ದರ್ಬೆ, ಪ್ರಧಾನ ಕಾರ್ಯದರ್ಶಿ ಸುಭಾಶ್ ರೈ ಮಿತ್ತೋಡಿ, ನಾಲ್ಕನೇ ಬೂತ್ ಅಧ್ಯಕ್ಷರಾದ ಗಂಗಾಧರ ನಾಯ್ಕ ಮುಳಿಗದ್ದೆ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತ್ಯಾಗರಾಜನಗರ, ಕೆದಂಬಾಡಿ ಶಕ್ತಿ ಕೇಂದ್ರ ಮನ್ ಕಿ ಬಾತ್ ಪ್ರಮುಖ್ ಧನಂಜಯ್ ಗೌಡ ಪಟ್ಟೆ, ಕೆದಂಬಾಡಿ ಶಕ್ತಿ ಕೇಂದ್ರದ ಮಾಜಿ ಪ್ರಮುಖ್ ನಾರಾಯಣ ಪೂಜಾರಿ ಕುರಿಕ್ಕಾರ, ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯರುಗಳು ಸೊಸೈಟಿ ನಿರ್ದೇಶಕರುಗಳು ಹಾಗೂ ಕೆದಂಬಾಡಿ ಶಕ್ತಿ ಕೇಂದ್ರದ ನಾಲ್ಕು ಬೂತುಗಳಿಂದ ಒಟ್ಟು 75ಕ್ಕೂ ಮಿಕ್ಕಿ ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here