ಬೆಳ್ತಂಗಡಿ: ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವಿಟ್ಲ ಜೇಸಿಐಯ ಪೂರ್ವಾಧ್ಯಕ್ಷರಾದ ರಶೀದ್ ವಿಟ್ಲ ಅವರಿಗೆ ಜು.27ರಂದು ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಚರ್ಚ್ ಹಾಲ್ ನಲ್ಲಿ ನಡೆದ ಜೆಸಿ ವಲಯ 15ರ ವ್ಯವಹಾರ ಸಮ್ಮೇಳನ ಮೃದಂಗ ದಲ್ಲಿ ಸಾಧನಾಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಜೆಸಿ ವಲಯಾಧ್ಯಕ್ಷರಾದ ಅಭಿಲಾಶ್ ಬಿ.ಎ. ಅವರು ರಶೀದ್ ವಿಟ್ಲ ಅವರಿಗೆ ಗೌರವ ಪ್ರದಾನ ಮಾಡಿದರು. ಜೆಸಿ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷರಾದ ಸಂಪತ್ ಬಿ. ಸುವರ್ಣ ಹಾಗೂ ಕಾರ್ತಿಕೇಯ ಮಧ್ಯಸ್ಥ, ಸಮ್ಮೇಳನ ಅಂಬಾಸಿಡರ್ ಸಂತೋಷ್ ಕುಮಾರ್ ಶೆಟ್ಟಿ, ವ್ಯವಹಾರ ವಿಭಾಗದ ವಲಯ ನಿರ್ದೇಶಕ ಅಶೋಕ್ ಗುಂಡ್ಯಲ್ಕೆ, ವಿಟ್ಲ ಜೆಸಿ ಅಧ್ಯಕ್ಷರಾದ ಸೌಮ್ಯ ಚಂದ್ರಹಾಸ್, ಕಾರ್ಯದರ್ಶಿ ಹೇಮಲತಾ ಜೈಕಿಶನ್, ವಲಯಾಽಕಾರಿ ಚಂದ್ರಹಾಸ ಶೆಟ್ಟಿ, ಪೂರ್ವಾಧ್ಯಕ್ಷರಾದ ಚಂದ್ರಹಾಸ್ ಕೊಪ್ಪಳ, ಲೂವಿಸ್ ಮಸ್ಕರೇಞಸ್, ಮೋನಪ್ಪ ಗೌಡ, ಸಂದೀಪ್, ನವೀನ್, ಹರ್ಷಿತ್, ಆರ್ಥಿಕ್, ವಿ.ಎಚ್. ಅಶ್ರಫ್, ಉಬೈದ್ ವಿಟ್ಲ, ಡಿ.ಎಂ. ರಶೀದ್, ಇಸಾಕ್ ಮೊದಲಾದವರು ಉಪಸ್ಥಿತರಿದ್ದರು.
