ಸುಹಾಸ್ ಮರಿಕೆಯವರಿಗೆ ಸಾಧನಶ್ರೀ ಪ್ರಶಸ್ತಿ ಪ್ರಧಾನ

0

ಪುತ್ತೂರು : JCI ಪುತ್ತೂರಿನ ಪೂರ್ವಾಧ್ಯಕ್ಷ, ಪ್ರಸ್ತುತ ವಲಯ 15ರ ಉಪಾಧ್ಯಕ್ಷ ಹಾಗೂ ಎಪಿಎಂಸಿ ತ್ರಿನೇತ್ರ ಸಂಕೀರ್ಣದಲ್ಲಿರುವ ಮರಿಕೆ ಸಾವಯವ ಮಳಿಗೆಯ ಮಾಲಕ JC ಸುಹಾಸ್ ಮರಿಕೆಯವರಿಗೆ ಉದ್ಯಮದ ಯಶಸ್ಸು ಹಾಗೂ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಜುಲೈ 27ರಂದು ಮಡಂತ್ಯಾರು ಸೀಕ್ರೆಟ್ ಹಾರ್ಟ್ ಚರ್ಚ್ ಹಾಲ್ ನಲ್ಲಿ ನಡೆದ JC ವಲಯ 15ರ ವ್ಯವಹಾರ ಸಮ್ಮೇಳನ ಮೃದಂಗದಲ್ಲಿ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.


JC ವಲಯ ಅಧ್ಯಕ್ಷರಾದ JC ಅಭಿಲಾಷ್ ಬಿ.ಎ ರವರು JC ಸುಹಾಸ್ ಮರಿಕೆಯವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ JCI ಪುತ್ತೂರಿನ ಅಧ್ಯಕ್ಷರಾದ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರು JC ಭಾಗ್ಯೇಶ್ ರೈ ರವರು ಹಾಗೂ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ JC ಮುರಳಿ ಶ್ಯಾಮ್, ಪೂರ್ವಾಧ್ಯಕ್ಷರು ಹಾಗೂ ಪೂರ್ವ ವಲಯ ಅಧ್ಯಕ್ಷರಾದ JC ಪುರುಷೋತ್ತಮ ಶೆಟ್ಟಿ , JAC ವಲಯ ಉಪಾಧ್ಯಕ್ಷ ಹಾಗೂ ಪೂರ್ವ ಅಧ್ಯಕ್ಷರಾದ ಪಶುಪತಿ ಶರ್ಮ, JCI ಪುತ್ತೂರು ಘಟಕದ ಕಾರ್ಯದರ್ಶಿ JC ಮನೋಹರ ಪಾಟಳಿ ,ಸಮ್ಮೇಳನದ ಅಂಬಾಸಿಡರ್ ಸಂತೋಷ್ ಕುಮಾರ್ ಶೆಟ್ಟಿ , JCI ಪುತ್ತೂರು ಘಟಕದ JC ಸುಹಾಸ್ ರೈ, JC ಗಣೇಶ್ JC ಭವಿತ್ JC ಅನುಪ್ ಕೆ ಜೆ , JC ಸತೀಶ್ , JC ಸತ್ಯ ಶಂಕರ್ ಉಪಸ್ಥಿತರಿದ್ದರು. ಜೀವಮಾನದ ಸಾಧನೆಗಾಗಿ ಸಾಧನಶ್ರೀ ಪ್ರಶಸ್ತಿ ಪ್ರಧಾನ ಗೌರವವನ್ನು JC ಸುಹಾಸ್ ಮರಿಕೆಯವರು ತನ್ನ ಪತ್ನಿ JC ಮಾನಸ ಸುಹಾಸ್ ಮತ್ತು ಮಕ್ಕಳಾದ ವಿರಾಟ್ ಶರ್ವ ,ವೈಸಿರಿ ರವರೊಂದಿಗೆ ಸ್ವೀಕರಿಸಿದರು.

ಪ್ರತಿ JCI ಘಟಕದ ಒಬ್ಬ ಸದಸ್ಯನಿಗೆ ಪ್ರತಿ ವರ್ಷ ವಲಯ ವ್ಯವಹಾರಿಕ ಸಮ್ಮೇಳನದಲ್ಲಿ ಅತ್ಯುತ್ತಮ ಉದ್ಯಮ ಸಾಧನೆ ಹಾಗೂ ಸಮಾಜ ಸೇವೆಗಾಗಿ ಸಾಧನಶ್ರೀ ಪ್ರಶಸ್ತಿ ನೀಡಲಾಗುತ್ತಿದ್ದು ,54 ವರ್ಷಗಳ ಸುಧೀರ್ಘ ಇತಿಹಾಸ ಇರುವ JCI ಪುತ್ತೂರು ಘಟಕದಲ್ಲಿ ನಾನು ಅಧ್ಯಕ್ಷನಾಗಿರುವ ಸಂದರ್ಭದಲ್ಲಿ ನಮ್ಮ ವಲಯ ಉಪಾಧ್ಯಕ್ಷರಾಗಿರುವ JC ಸುಹಾಸ್ ಮರಿಕೆ ಅವರಿಗೆ ಸಾಧನಶ್ರೀ ಸಿಕ್ಕಿರೋದು ನನಗೆ ಅತ್ಯಂತ ಖುಷಿ ತಂದಿದೆ . ಮರಿಕೆ ಸಾವಯವ ಮಳಿಗೆಯ ಮೂಲಕ ಕಿರಿಯ ವಯಸ್ಸಿನಲ್ಲೇ ಯಶಸ್ವಿ ಉದ್ಯಮಿಯಾಗಿರುವ ಇವರಿಗೆ ಸಾಧನಶ್ರೀ ಪ್ರಶಸ್ತಿಗೆ ಘಟಕದ ವತಿಯಿಂದ ಮನವಿ ಮಾಡಲಾಗಿತ್ತು.

JC ಭಾಗ್ಯೇಶ್ ರೈ
ಅಧ್ಯಕ್ಷರು JCI ಪುತ್ತೂರು -2025

LEAVE A REPLY

Please enter your comment!
Please enter your name here