ಕೌಡಿಚ್ಚಾರು ವಿವೇಕಾನಂದ ಯುವಕ ವೃಂದದಿಂದ ಕಾರ್ಗಿಲ್ ವಿಜಯ ದಿನ-ವನಮಹೋತ್ಸವ

0

ಪುತ್ತೂರು: ಕೌಡಿಚ್ಚಾರು ವಿವೇಕಾನಂದ ಯುವಕ ವೃಂದದ ವತಿಯಿಂದ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಕಾರ್ಗಿಲ್ ವಿಜಯ ದಿನ ಹಾಗೂ ವನಮಹೋತ್ಸವ ಆಚರಿಸಲಾಯಿತು.


ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ರಾಮದಾಸ ರೈ ಮದ್ಲ ದೀಪ ಪ್ರಜ್ವಲಿಸಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಾಣಾಜೆ ವಲಯ ನಿವೃತ್ತ ಅರಣ್ಯ ವೀಕ್ಷಕ ದೇವಪ್ಪ ನಾಯ್ಕ ಮಾಯಿಲಕೊಚ್ಚಿ ಮಂದಿರದ ವಠಾರದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಯುವಕ ವೃಂದದ ಪ್ರಧಾನ ಕಾರ್ಯದರ್ಶಿ ಪ್ರತೀಕ್ ಪೂಜಾರಿ ಆಕಾಯಿ ಕಾರ್ಗಿಲ್ ವಿಜಯ ದಿವಸದ ಬಗ್ಗೆ ಉಪನ್ಯಾಸ ನೀಡಿದರು. ಯುವಕ ವೃಂದದ ಮಾಜಿ ಅಧ್ಯಕ್ಷ ದೀಪಕ್ ಕುಲಾಲ್ ದೇಶಭಕ್ತಿಗೀತೆ ಹಾಡಿದರು. ಯುವಕ ವೃಂದದ ಮಾಜಿ ಅಧ್ಯಕ್ಷ ದುರ್ಗಾಪ್ರಸಾದ್ ಕುತ್ಯಾಡಿ ಪ್ರಾಸ್ತಾವಿಕ ಮಾತನಾಡಿದರು.

ಯುವಕ ವೃಂದದ ಅಧ್ಯಕ್ಷ ಉದಯ ಕುಮಾರ್ ಆಕಾಯಿ ಅಧ್ಯಕ್ಷತೆ ವಹಿಸಿದ್ದರು, ಸಾಂಸ್ಕೃತಿಕ ಕಾರ್ಯದರ್ಶಿ ಚರಣ್ ರಾಜ್ ಎಂ.ಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ವಸಂತ್ ಕುಲಾಲ್ ಆಕಾಯಿ ವಂದಿಸಿದರು.


ಯುವಕ ವೃಂದದ ಪದಾಧಿಕಾರಿಗಳು ಹಾಗೂ ಸದಸ್ಯರಾದ, ಮುಕುಂದ ನಾಯ್ಕ ದೇವುಮೂಲೆ, ಕೃಷ್ಣ ಕುಲಾಲ್ ಕೌಡಿಚ್ಚಾರು, ಹರೀಶ್ ಕುಲಾಲ್ ಪಿ.ಆರ್. ಪಾದಲಾಡಿ, ಸುಕುಮಾರ ಕರ್ಕೇರ ಮಡ್ಯಂಗಳ, ಚಂದ್ರ ಜಿ. ಕುತ್ಯಾಡಿ, ಜಯಪ್ರಕಾಶ್ ಜಿ.ಪಿ ಕುತ್ಯಾಡಿ, ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here