ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೆಟ್ಟಂಪಾಡಿ ವಲಯ ಅಜ್ಜಿಕಲ್ಲು ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷೆ ಸರೋಜರವರ ಅಧ್ಯಕ್ಷತೆಯಲ್ಲಿ ಜು.27 ರಂದು ಅಜ್ಜಿಕಲ್ಲು ಸ.ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ನಡೆಯಿತು.
ಕೃಷಿ ಸಖಿ ಉಷಾರವರು ಸಂಘದ ಸದಸ್ಯರಿಗೆ ಕೃಷಿ ಬಗ್ಗೆ ಮಾಹಿತಿ ನೀಡಿದರು. ವಿಶೇಷವಾಗಿ ಕೇಂದ್ರ ಸರಕಾರದಿಂದ ಕೃಷಿಕರಿಗೆ ಸಿಗುವ ಸೌಲಭ್ಯಗಳು, ಅನುದಾನಗಳ ಬಗ್ಗೆ ವಿವರವಾಗಿ ತಿಳಿಸಿದರು. ಇದಲ್ಲದೆ ತೋಟಗಾರಿಕಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಹಾಗೇ ಕೃಷಿಕರು ತಾಳೆ ಕೃಷಿ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯುವ ಬಗ್ಗೆಯೂ ಮಾಹಿತಿ ನೀಡಿದರು. ವಿದ್ಯಾಮಾತ ಅಕಾಡೆಮಿ ಪುತ್ತೂರು ಇದರ ಶಿಕ್ಷಕಿ ಚೇತನಾರವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು, ಸ್ವ ಉದ್ಯೋಗದ ಬಗ್ಗೆ ಮಾಹಿತಿ ನೀಡಿದರು. ಸಂಘದ ಸದಸ್ಯರ ಮಕ್ಕಳು ಇವುಗಳ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಸೋಹಾನ್ ಗೌಡರವರು ಯೋಜನೆಯ ನಿಯಮಗಳ ಬಗ್ಗೆ ಸಾಲ ಸೌಲಭ್ಯಗಳ ಬಗ್ಗೆ ಹಾಗೇ ಸಂಘದ ಸದಸ್ಯರುಗಳು ನಿಯಾನುಸಾರ ಸಭೆ ನಡೆಸುವ ಬಗ್ಗೆ ಸಾಲದ ಕಂತುಗಳನ್ನು ಸಕಾಲಕ್ಕೆ ಪಾವತಿಸುವ ಬಗ್ಗೆ ಮಾಹಿತಿ ಸಲಹೆ ಮಾರ್ಗದರ್ಶನಗಳನ್ನು ನೀಡಿದರು. ಸೇವಾ ಪ್ರತಿನಿಧಿ ತ್ರಿವೇಣಿ ಪಲ್ಲತ್ತಾರುರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ನಿರಂತರ ಪತ್ರಿಕೆ ಹಾಗೇ ಸಂಘದ ಸಭೆಗಳನ್ನು ನಡೆಸುವ ಬಗ್ಗೆ ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು. ಒಕ್ಕೂಟದ ಜತೆ ಕಾರ್ಯದರ್ಶಿ ಉಷಾ ವರದಿ ವಾಚಿಸಿದರು. ಶ್ರೀಜ್ಯೋತಿ ಮತ್ತು ಮಾತೃಶ್ರೀ ಸಂಘಗಳು ಜವಬ್ದಾರಿ ತಂಡಗಳಾಗಿದ್ದವು. ಮೋಹನ್ ನಾಯ್ಕ ಮುಂಡೋವುಮೂಲೆ ಸ್ವಾಗತಿಸಿದರು.ಬೇಬಿ ಅಡ್ಕತ್ತೋಡಿ ವಂದಿದರು. ಒಕ್ಕೂಟದ ಉಪಾಧ್ಯಕ್ಷ ಮೋಹನಚಂದ್ರ ಕಾರ್ಯಕ್ರಮ ನಿರೂಪಿಸಿದರು.