ಪುತ್ತೂರು : ವಿದ್ಯಾರ್ಥಿಗಳು ಅಧ್ಯಯನ ಶೀಲರಾಗುವುದರ ಜೊತೆಗೆ ತಮ್ಮ ಮನದ ಮಾತು ಆಲಿಸಿ , ಅದರಂತೆ ನಡೆದುಕೊಂಡು ನಿಮ್ಮಲ್ಲಿ ಅಡಕಾವಾಗಿರುವ ಪ್ರತಿಭೆಯನ್ನು ಹೊರತನ್ನಿರಿ ಎಂದು ಪ್ರಗತಿ ಆಸ್ಪತ್ರೆಯ ಹಿರಿಯ ವೈದ್ಯೆ, ಪ್ರಗತಿ ಹಾಸ್ಪಿಟಲ್ ಎಜುಕೇಷನ್ ನ ಟ್ರಷ್ಟಿ ಡಾ! ಸುಧಾ ಎಸ್. ರಾವ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅವರು ಪ್ರಗತಿ ಪ್ಯಾರ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜ್ ಬೋಳ್ವಾರ್ ಇದರ ಸಾಂಸ್ಕೃ ತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿ , ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಹಾರೈಸಿದರು. ಮುಖ್ಯ ಅತಿಥಿ ಮತ್ತು ತೀರ್ಪುಗಾರರಾಗಿ ಆಗಮಿಸಿದ ಬಿ. ಎಸ್. ಎನ್. ಎಲ್. ನಿವೃತ್ತ ಇಂಜಿನಿಯರ್ ರೋ. ದಾಮೋದರ ಕೆ. ಎ. ಪಾಲ್ಗೊಂಡರು. ವೇದಿಕೆಯಲ್ಲಿ ಸಂಸ್ಥೆಯ ಆಡಳಿತಧಿಕಾರಿ ಪ್ರೀತಾ ಹೆಗ್ಡೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಂಕಿತಾ ಪ್ರಾರ್ಥಸಿ, ಉಪನ್ಯಾಸಕರಾದ ದೀಕ್ಷಾ ಸ್ವಾಗತಿಸಿ, ರೇಷ್ಮಾ ವಂದಿಸಿದರು. ಶಶಿಕುಮಾರ್ ನಿರೂಪಿಸಿದರು.