ಪುತ್ತೂರು: ಸಂಘಟನೆ ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೆ ನಾವು ನಮ್ಮಲ್ಲಿ ಒಗ್ಗಟ್ಟು ಪ್ರದರ್ಶಿಸುವಂತಾಗಬೇಕು. ಬಿಲ್ಲವ ಸಂಘದ 55 ಗ್ರಾಮ ಸಮಿತಿಗಳು ಸಂಘಟಿತರಾಗಿ ಉತ್ತಮ ಕಾರ್ಯ ಮಾಡಿದ್ದರಿಂದ ಬಿಲ್ಲವ ಸಂಘ ಬಲವರ್ಧನೆಯಾಗಿ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದೆ ಎಂದು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಹೇಳಿದರು. ಜು.27 ರಂದು ಬಪ್ಪಳಿಗೆ-ಪುತ್ತೂರು ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ 2024-25ನೇ ಸಾಲಿನ 49ನೇ ವಾರ್ಷಿಕ ಮಹಾಸಭೆಯು ಜು.27 ರಂದು ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ ಜರಗಿದ್ದು, ಈ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಿಲ್ಲವ ಸಂಘದ ಹಿರಿಯರ ಸೇವೆ, ತ್ಯಾಗದ ಫಲವಾಗಿ ಇಂದು ಪುತ್ತೂರಿನಲ್ಲಿ ಬಿಲ್ಲವ ಸಂಘ ಮುಂದುವರೆದಿದೆ. ಮುಂದಿನ ದಿನಗಳಲ್ಲೂ ಅವರ ಮಾರ್ಗದರ್ಶನದಲ್ಲಿ ಆಟಿ ಕೂಟ, ವರಮಹಾಲಕ್ಷ್ಮೀ ಪೂಜೆ ಇತ್ಯಾದಿಗಳು ಕಾರ್ಯಕ್ರಮಗಳು ನಡೆಯಲಿದ್ದು ಎಲ್ಲರ ಸಹಕಾರ ನಮ್ಮೊಂದಿಗಿರಲಿ ಎಂದರು.
ನೂತನ ಕಾರ್ಯಕಾರಿ ಸಮಿತಿ ರಚನೆ:
ಈ ಸಂದರ್ಭದಲ್ಲಿ 2025-28 ಚುನಾವಣೆ ಸಾಲಿನ ಸಂಘದ ಕಾರ್ಯಕಾರಿ ಸಮಿತಿಯ ರಚನೆ ಪಟ್ಟಿಯ ಜೊತೆಗೆ ಚುನಾವಣಾಧಿಕಾರಿಯಾಗಿ ಪಾಪೆಮಜಲು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮೋನಪ್ಪ ಪೂಜಾರಿರವರನ್ನು ನೇಮಿಸಲಾಗುವುದೆಂದು ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಅಧಿಕೃತವಾಗಿ ಘೋಷಿಸಿದರು. ಕಾರ್ಯಕಾರಿ ಸಮಿತಿಯಲ್ಲಿ ವಲಯ ಸಂಚಾಲಕರಾಗಿ ದೇವಿಕಾ ಬನ್ನೂರು, ನಾಗೇಶ್ ಬಲ್ನಾಡು, ರಾಮಚಂದ್ರ ಪೂಜಾರಿ ಬೆಳ್ಳಿಪ್ಪಾಡಿ, ಅಶೋಕ್ ಕುಮಾರ್ ಪಡ್ಪು, ಅಜಿತ್ ಕುಮಾರ್ ಪಾಲೇರಿ, ಬಾಬು ಪೂಜಾರಿ ಇದ್ಪಾಡಿ, ಗಿರೀಶ್ ಕುಮಾರ್ ಕನ್ನಡ್ಕ, ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಸಂತೋಷ್ ಕುಮಾರ್ ಮರಕ್ಕಡ, ದಿನೇಶ್ ಕೇಪುಳು, ಲಕ್ಷ್ಮೀಶ ಬಂಗೇರ, ಸತೀಶ್ ಕೆ.ಐತೂರು, ಸಂಘ-ಸಂಸ್ಥೆ ಪ್ರತಿನಿಧಿಗಳಾಗಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪುಷ್ಪಾವತಿ ಬಿ.ಎಮ್, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಅಣ್ಣಿ ಪೂಜಾರಿ ಅನಂತಿಮಾರು, ಉಪ್ಪಿನಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ನಾಣ್ಯಪ್ಪ ಪೂಜಾರಿ, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಜಯಂತ್ ನಡುಬೈಲು, ವಿವಿಧ ಗ್ರಾಮ ಸಮಿತಿ ಅಧ್ಯಕ್ಷರುಗಳಾದ ಪುತ್ತೂರು ನಗರ ವಲಯದಿಂದ ಮೋಹನ್ ತೆಂಕಿಲ(ಪುತ್ತೂರು ಕಸಬಾ), ಶೀನಪ್ಪ ಪೂಜಾರಿ ಬನ್ನೂರು(ಬನ್ನೂರು), ಕೇಶವ ಪೂಜಾರಿ ಬೆದ್ರಾಳ(ಕೇಪುಳು-ಬೆದ್ರಾಳ), ಬಲ್ನಾಡು ವಲಯದಿಂದ ಉಮೇಶ್ ಬಾಯಾರು(ಬಲ್ನಾಡು),’ಸುಂದರ ಪೂಜಾರಿ ಕಾಡ್ಲ(ಬುಳೇರಿಕಟ್ಟೆ), ಕೇಶವ ಪೆಲತ್ತಡಿ(ಕೊಡಿಪ್ಪಾಡಿ), ಶ್ರೀಧರ ಪೂಜಾರಿ ನೈತ್ತಾಡಿ(ಕೆಮ್ಮಿಂಜೆ),ಪುತ್ತೂರು ಗ್ರಾಮಾಂತರ ವಲಯದಲ್ಲಿ ರವಿಚಂದ್ರ ಪಡ್ಡಾಯೂರು(ಪಡ್ನೂರು), ಅಣ್ಣಿ ಪೂಜಾರಿ ಅನಂತಿಮಾರು(ಚಿಕ್ಕಮುಡ್ನೂರು), ವಸಂತ ಪೂಜಾರಿ(ಬೆಳ್ಳಿಪ್ಪಾಡಿ), ಉಲ್ಲಾಸ್ ಕೋಟ್ಯಾನ್(ಕೋಡಿಂಬಾಡಿ), ಮನೋಹರ್ ಕಾರ್ಜಾಲು(ಕಬಕ), ಉಪ್ಪಿನಂಗಡಿ ವಲಯದಿಂದ ವಸಂತ ಕುಕ್ಕುಜೆ(ಉಪ್ಪಿನಂಗಡಿ), ಗೋಪಾಲ ಎಚ್.ಎ(34ನೇ ನೆಕ್ಕಿಲಾಡಿ), ಸದಾಶಿವ ಬಂಗೇರ ಎಲಿಯ(ಹಿರೇಬಂಡಾಡಿ), ಸೋಮಸುಂದರ(ಬಜತ್ತೂರು), ನೆಲ್ಯಾಡಿ ವಲಯದಿಂದ ಬಾಬು ಪೂಜಾರಿ(ಗೋಳಿತ್ತೊಟ್ಟು-ಆಲಂತಾಯ), .ಮಾಧವ ಪೂಜಾರಿ(ಶಿರಾಡಿ-ಕೊಣಾಜೆ-ಸಿರಿಬಾಗಿಲು), ಗಿರೀಶ್ ಸಾಲಿಯಾನ್ ಬದನೆ(ಇಚ್ಲಂಪಾಡಿ) ನೋಣಯ್ಯ ಅಂಬರ್ಜೆ(ನೆಲ್ಯಾಡಿ-ಕೌಕ್ರಾಡಿ-ಕೊಣಾಲು), ಆರ್ಯಾಪು ವಲಯದಿಂದ ರವಿ ಸುವರ್ಣ(ಆರ್ಯಾಪು), ಸುಂದರ ಪೂಜಾರಿ(ಕುರಿಯ), ಚಿದಾನಂದ ಸುವರ್ಣ(ಕುಂಜೂರುಪಂಜ), ಆನಂದ ಪೂಜಾರಿ(ಇರ್ದೆ-ಬೆಟ್ಟಂಪಾಡಿ), ವಿಶ್ವನಾಥ ಪೂಜಾರಿ(ಪಾಣಾಜೆ), ರಾಜೇಶ್ ನೆಲ್ಲಿತ್ತಡ್ಕ(ನಿಡ್ಪಳ್ಳಿ), ಕುಂಬ್ರ ವಲಯದಿಂದ ಸುಶಾಂತ್ ಅಜ್ಜಿಕಲ್ಲು(ಒಳಮೊಗ್ರು), ವಿಶ್ವನಾಥ ಪೂಜಾರಿ(ಕೆಯ್ಯೂರು), ಬಾಲಪ್ಪ ಪೂಜಾರಿ(ಕೆದಂಬಾಡಿ), ಸುಂದರ ಪೂಜಾರಿ(ಕೊಳ್ತಿಗೆ), ಭರತ್ ಪೂಜಾರಿ(ಅರಿಯಡ್ಕ), ತಾರಾನಾಥ(ಪಾಲ್ತಾಡಿ), ಬಡಗನ್ನೂರು ವಲಯದಿಂದ ಜನಾರ್ದನ ಪೂಜಾರಿ ಪದಡ್ಕ(ಸುಳ್ಯಪದವು-ಪಡುವನ್ನೂರು), ಪ್ರಕಾಶ್ ಸಾಲಿಯಾನ್(ಬಡಗನ್ನೂರು), ನಾರಾಯಣ ಪೂಜಾರಿ(ನೆಟ್ಟಣಿಗೆ ಮುಡ್ನೂರು), ಮೋನಪ್ಪ ಪೂಜಾರಿ(ಕಾವು), ನರಿಮೊಗರು ವಲಯದಿಂದ ಹರೀಶ್ ಎಂ.ಕೆ(ನರಿಮೊಗರು), ನಾರಾಯಣ ಪೂಜಾರಿ(ಆನಡ್ಕ), ದಾಮೋದರ್ ಕೆ(ಶಾಂತಿಗೋಡು), ಉಮೇಶ್ ಎಸ್.ಡಿ(ಸರ್ವೆ), ಅನಿಲ್ ಕನ್ನರ್ ನೂಜಿ(ಮುಂಡೂರು), ಸವಣೂರು ವಲಯದಿಂದ ವಿಜಯಕುಮಾರ್ ಸೊರಕೆ(ಕಾಣಿಯೂರು-ಚಾರ್ವಾಕ-ದೋಲ್ಪಾಡಿ), ಸತೀಶ್ ಕುಮಾರ್ ಕೆಡೆಂಜಿ(ಕುದ್ಮಾರು-ಬೆಳಂದೂರು-ಕಾಯೈಮಣ), ಅಕ್ಷಯ್ ಕುಮಾರ್(ಸವಣೂರು-ಪುಚ್ಚಪ್ಪಾಡಿ), ಆಲಂಕಾರು ವಲಯದಿಂದ ಚಂದ್ರಶೇಖರ(ಆಲಂಕಾರು), ಪುರುಷೋತ್ತಮ(ಹಳೇನೇರಂಕಿ), ಸಂಜೀವ ಮಾರಂಗ(ರಾಮಕುಂಂಜ-ಕೊಯಿಲ), ಉದಯಕುಮಾರ್(ಪೆರಾಬೆ-ಕುಂತೂರು), ಕಡಬ ವಲಯದಿಂದ ಹರೀಶ್ ಡಿ.ಎಚ್(ಬಲ್ಯ), ಜಯಪ್ರಕಾಶ್ ದೋಳ(ಕಡಬ-ಕುಟ್ರುಪ್ಪಾಡಿ), ಬಾಬು ಪೂಜಾರಿ(ಕೋಡಿಂಬಾಳ), ಮರ್ದಾಳ ವಲಯದಿಂದ ರಧೀಶ್(ನೂಜಿಬಾಳ್ತಿಲ), ಸಂಜೀವ ಪೂಜಾರಿ(ರೆಂಜಿಲಾಡಿ), ಉದಯ ಮಿತ್ತೋಡಿ(ಐತೂರು-ಬಂಟ್ರ-102ನೆಕ್ಕಲಾಡಿ), ನೋಣಯ್ಯ ಕೆ(ಕೊಂಬಾರು-ಬಿಳಿನೆಲೆ)ರವರು ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ 2024-25ನೇ ಸಾಲಿನ ಸಂಘದ ಬಜೆಟಿನಲ್ಲಿನ ಹೆಚ್ಚುವರಿ ಖರ್ಚು ಮಂಜೂರಾತಿ ಪಡೆಯಲಾಯಿತು. 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಲಾಯಿತು. ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಸ್ವಾಗತಿಸಿ, ಉಪಾಧ್ಯಕ್ಷೆ ವಿಮಲಾ ಸುರೇಶ್ ವಂದಿಸಿದರು. ವೇದಿಕೆಯಲ್ಲಿ ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಿದಾನಂದ ಸುವರ್ಣ ವರದಿ ಮಂಡಿಸಿದರು. ಸಂಘದ ಲೆಕ್ಕಪತ್ರವನ್ನು ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಗುರುಮಂದಿರದ ಲೆಕ್ಕಪತ್ರವನ್ನು ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ ನೀಡಿದರು.