ಸಮಾಜವೇ ನನ್ನ ಬಂಧುಗಳೆಂದು ಬದುಕಿದವರು – ಕುಂಬ್ರ ದುರ್ಗಾಪ್ರಸಾದ್ ರೈ
ಪುತ್ತೂರು: ಕನ್ನಡದ ಕಟ್ಟಾಳು ಎಲ್ಲರಿಗೂ ಚಿರಪರಿಚಿತರಾಗಿದ್ದ ಸೀತಾರಾಮ ರೈ ಬನ್ನೂರು ಅವರ ಉತ್ತರ ಕ್ರಿಯೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಜು.28ರಂದು ಕೊಂಬೆಟ್ಟು ಸುಂದರರಾಮ್ ಶೆಟ್ಟಿ ಬಂಟರ ಭವನದಲ್ಲಿ ನಡೆಯಿತು.
ಸೀತಾರಾಮ ರೈ ಅವರ ಮನೆ ಮಂದಿ ಮತ್ತು ಕುಟುಂಬಸ್ಥರು ವೇದಿಕೆಯಲ್ಲಿ ಸೀತಾರಾಮ ರೈ ಅವರ ಭಾವ ಚಿತ್ರದ ಎದುರು ದೀಪ ಪ್ರಜ್ವಲನೆ ಮಾಡಿ ಪುಷ್ಪಾರ್ಚಣೆ ಮಾಡಿದರು. ಬಳಿಕ ವಕೀಲರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ಅವರು ನುಡಿನಮನ ಸಲ್ಲಿಸಿದರು. ಇದೇ ಸಂದರ್ಭ ಒಂದು ನಿಮಿಷ ಮೌನ ಪ್ರಾರ್ಥನೆಯೊಂದಿಗೆ ಅಗಲಿದ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.
ಸಮಾಜವೇ ನನ್ನ ಬಂಧುಗಳೆಂದು ಬದುಕಿದವರು:
ಕುಂಬ್ರ ದುರ್ಗಾಪ್ರಸಾದ್ ರೈ ಅವರು ಮಾತನಾಡಿ ಮಧ್ಯಮ ವರ್ಗದಿಂದ ಬಂದಿರುವ ಸೀತಾರಾಮ ರೈ ಅವರು ಎಲ್ಲೂ ವೇದಿಕೆಗೆ ಅಪೇಕ್ಷೆ ಪಟ್ಟವರಲ್ಲ. ಸಮಾಜವೇ ನನ್ನ ಬಂಧುಗಳೆಂದು ಬದುಕಿದವರು. ತನ್ನ ಜೀವನದ ಉದ್ದಕ್ಕೂ ಕನ್ನಡದ ಕೈಂಕರ್ಯ ಮಾಡಿದರು. ಆದರೆ ಎಲ್ಲೂ ಅವರು ವೇದಿಕೆಯ ಮೇಲೆ ಬಂದಿರಲಿಲ್ಲ. ಅವರು ವೇದಿಕೆಯ ಹಿಂದೆ ನಿಂತು ಮಾಡಿದ ಕೆಲಸ ಸಣ್ಣದಿರಬಹುದು. ಆದರೆ ಅದು ಬಹಳ ಹೆಮ್ಮರವಾಗಿ ಬೆಳೆದಿದೆ ಎಂದ ಅವರು ಗಾಂಧಿಕಟ್ಟೆಯ ಬಳಿ ಅಶ್ವತ್ಥ ಗಿಡವನ್ನು ರಿಕ್ಷಾದಲ್ಲಿ ಮೆರವಣಿಗೆ ಮೂಲಕ ತಂದು ನೆಟ್ಟರು. ಅದಕ್ಕಾಗಿ ಎಲ್ಲೂ ಪ್ರಚಾರಗಿಟ್ಟಿಸಿಲ್ಲ. ಕನ್ನಡ ರಾಜ್ಯೋತ್ಸವದಂದು ಸೈಕಲ್‌ನಲ್ಲಿ ಪೇಟೆಯಲ್ಲಿ ಧ್ವಜವಿಟ್ಟು ಸುತ್ತಿದರು. ಹಲವು ವೇಷ ಹಾಕಿದರು. ಎಲ್ಲೂ ಪ್ರಚಾರ ಬಯಸಿಲ್ಲ. ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷದ ಅಭಿಮಾನಿಯಾಗಿದ್ದರೂ ಎಲ್ಲೂ ವೇದಿಕೆ ಹಂಚಿಕೊಂಡಿಲ್ಲ. ಅವರು ಮಾಡಿದ ಪ್ರತಿಯೊಂದು ಕೆಲಸವು ಇವತ್ತು ದೊಡ್ಡ ವಿಚಾರವಾಗಿ ನಮ್ಮ ಮುಂದೆ ಕಾಣುತ್ತದೆ. ಹಲವು ವರ್ಷ ಶಬರಿಮಲೆಗೆ ಹೋದವರು. 40 ವರ್ಷದ ಹಿಂದೆ ಪುತ್ತೂರಿಗೆ ಬಾಂಬೆ ಬೀಡ ಪರಿಚಯ ಮಾಡಿದವರು. ರಾತ್ರಿಯಿಂದ ಬೆಳಗ್ಗಿನ ತನಕ ಅರುಣಾ ಚಿತ್ರ ಮಂದಿರದ ಬಳಿ ದೋಸೆ ನೀಡುವ ಮೂಲಕ ಹಲವು ಹೊಸತನಗಳಿಗೆ ಕಾರಣರಾಗಿದ್ದರು. ಜೊತೆಗೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದಕ್ಕಿಂತ ಹೇಗೆ ಜೀವನ ನಡೆಸಬೇಕೆಂದು ತೋರಿಸಿಕೊಡುವ ಮೂಲಕ ಮಾದರಿಯಾಗಿದ್ದರು ಎಂದರು. ಅವರ ಸಾಧನೆಗೆ ಬಸವ ಜ್ಯೋತಿ ಪುರಸ್ಕಾರ, ರೋಟರಿ ಕ್ಲಬ್‌ನಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಆಗಿದೆ. ಪುತ್ತೂರಿನಲ್ಲೇ ಇದ್ದು ಕನ್ನಡ, ತುಳು, ಗಾಂಧಿ ಕಾರ್ಯಕ್ರಮದಲ್ಲಿ ಸೀತಾರಾಮ ರೈ ಮಾಡಿದ ಕೆಲಸ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ ಎಂದರು.
ನುಡಿನ ನಮನದ ಬಳಿಕ ಸಭೆಗೆ ಆಗಮಿಸಿದ ಎಲ್ಲಾ ಗಣ್ಯರು ವೇದಿಕೆಯಲ್ಲಿ ಸೀತಾರಾಮ ರೈ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು. ಇದೇ ಸಂದರ್ಭ ಮಂಗಳೂರಿನ ಮುರಳಿಧರ ಕಾಮತ್ ತಂಡದಿಂದ ವಿಷ್ಣು ಸಂಕೀರ್ತನೆ ಭಜನಾ ಕಾರ್ಯಕ್ರಮ ನಿರಂತರ ನಡೆಯುತ್ತಿತ್ತು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ ಯು.ಪಿ.ಶಿವಾನಂದ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೆಪಿಸಿಸಿ ಸದಸ್ಯ ಎಂ.ಎಸ್ ಮಹಮ್ಮದ್, ನಗರಸಭಾ ಮಾಜಿ ಸದಸ್ಯ ಮಹಮ್ಮದ್ ಆಲಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ ರಘು ಬೆಳ್ಳಿಪ್ಪಾಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ ಶೆಟ್ಟಿ, ಮಾಜಿ ಸದಸ್ಯ ಶೇಖರ್ ನಾರಾವಿ, ಶ್ರೀ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಕೋಶಾಧಿಕಾರಿ ನೀಲಂತ್ ಬೊಳುವಾರು, ಪದ್ಮಾ ಸ್ಟುಡಿಯೋದ ಮಾಲಕ ಸುದರ್ಶನ್ ರಾವ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನಿರಂಜನ್ ರೈ ಮಠಂತಬೆಟ್ಟು, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಯಕ್ಷಗಾನ ಕಲಾವಿದ ದಾಸಪ್ಪ ರೈ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಪುತ್ತೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ನಿವೃತ್ತ ಮುಖ್ಯಗುರು ಶ್ರೀಧರ್ ರೈ, ನಗರಸಭಾ ಸದಸ್ಯರಾದ ಶೈಲಾ ಪೈ, ಪ್ರೇಮಲತಾ ನಂದಿಲ, ರಾಬಿನ್ ತಾವ್ರೊ, ದಿನೇಶ್ ಶೇವಿರೆ, ಮೋಹಿನಿ ವಿಶ್ವನಾಥ ಗೌಡ, ಬನ್ನೂರು ಶ್ರೀ ಶಿವಪಾರ್ವತಿ ಮಂದಿರ ಅಧ್ಯಕ್ಷ ವಿಶ್ವನಾಥ ಗೌಡ, ಗೌರವಾಧ್ಯಕ್ಷ ಉದಯ ಕುಮಾರ್ ಹಾರಾಡಿ, ಮಾಜಿ ಪುರಸಭೆ ಸದಸ್ಯ ಹೆಚ್ ಉದಯ, ಗುರುದೇವಾ ಸೇವಾ ಬಳಗದ ಸುಧೀರ್ ನೋಂಡಾ, ನಯನಾ ರೈ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಈಶ ಶಿಕ್ಷಣ ಸಂಸ್ಥೆಯ ಪ್ರಾಂಶಪಾಲ ಗೋಪಾಲಕೃಷ್ಣ, ಕಾಂಗ್ರೆಸ್ ನಗರ ವಲಯ ಅಧ್ಯಕ್ಷ ಲೋಕೇಶ್ ಪಡ್ಡಾಯೂರು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ರಂಜಿತ್ ಬಂಗೇರ, ಮಾಧವ ಸ್ವಾಮಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಬನ್ನೂರು ವೀನಾಕ್ಷಿ ಪೂಜಾರಿ, ನವೀನ್ ರೈ ಪಂಜಳ, ಅಕ್ಷಯ್ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು, ಲ್ಯಾನ್ಸಿ ಮಸ್ಕರೇನಸ್, ಯೋಗೀಶ್ ಪಡೀಲ್, ಜಗದೀಶ್ ಸಾಮನಿ, ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ, ಸುಧಾಕರ್ ಶೆಟ್ಟಿ ಮಿತ್ತೂರು, ಮನೋಹರ್ ರೈ ಮೇಲ್ಮಜಲು, ಗಿರಿಧರ್ ಹೆಗ್ಡೆ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಮುಖ್ಯ ಕಾರ್ಯನಿರ್ವಹಣಧಿಕಾರಿ ವಸಂತ ಜಾಲಾಡಿ, ವಸಂತ ರೈ, ರಾಮ್ ದಾಸ್ ಹಾರಾಡಿ, ಮೋಹನ್ ರೈ ಸಹಿತ ಹಲವಾರು ಮಂದಿ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದರು.
ಕೆ.ಸೀತಾರಾಮ ರೈ ಅವರ ಪುತ್ರರಾದ ರೋಶನ್ ರೈ ಬನ್ನೂರು, ರೋಹಿತ್ ರೈ ಬನ್ನೂರು, ಪುತ್ರಿ ರೋಜಾ, ಸೊಸೆಯಂದಿರಾದ ಸ್ವಸ್ತಿಕಾ ರೋಶನ್ ರೈ, ಕವಿತಾ ರೋಹಿತ್ ರೈ, ಅಳಿಯ ರಾಜೇಶ್ ಶೆಟ್ಟಿ ಮುಡಿಪು, ಮೊಮ್ಮಕ್ಕಳು ಮತ್ತು ಸಹೋದರರು ಹಾಗು ಸಹೋದರಿಯರು, ಕೆರೆಮೂಲೆ ಕುಟುಂಬದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.