ರೂ.60.44 ಕೋಟಿ ವ್ಯವಹಾರ, ರೂ.59.12ಲಕ್ಷ ಲಾಭ, ಶೇ.12 ಡಿವಿಡೆಂಡ್
ಪುತ್ತೂರು: ಹತ್ತು ವರ್ಷಗಳನ್ನು ಪೂರೈಸಿರುವ ಸುದ್ದಿ ಸೌಹಾರ್ದ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ರೂ.60.44 ಕೋಟಿ ವ್ಯವಹಾರ ನಡೆಸಿ, ರೂ.59.12 ಲಕ್ಷ ಲಾಭಗಳಸಿದೆ. ಸದಸ್ಯರಿಗೆ ಶೇ.12 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಡಾ.ಯು.ಪಿ ಶಿವಾನಂದ ಅವರು ಸಂಘದ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಸಂಘದ ಹತ್ತನೇ ಮಹಾಸಭೆಯು ಜು.26ರಂದು ರೋಟರಿ ಮನಿಷಾ ಹಾಲ್‌ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2015-16ರಲ್ಲಿ ಪ್ರಾರಂಭಗೊಂಡಿರುವ ಸಹಕಾರಿ ಸಂಘದಲ್ಲಿ ಕಳೆದ ಆರ್ಥಿಕ ವರ್ಷಾಂತ್ಯಕ್ಕೆ 3480 ಸದಸ್ಯರಿದ್ದು ರೂ.8,36,500 ಪಾಲು ಬಂಡವಾಳ ಹೊಂದಿದೆ. ರೂ.12,75,59,764-81 ವಿವಿಧ ಠೇವಣಾತಿ ಹೊಂದಿದೆ. ರೂ.3,65,55,427ನ್ನು ವಿವಿಧ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ. ಸದಸ್ಯರಿಗೆ ವಿವಿಧ ರೂಪದಲ್ಲಿ ರೂ.11,39,96,151 ಸಾಲ ವಿತರಿಸಲಾಗಿದೆ. ಸಾಲ ವಸೂಲಾತಿಯಲ್ಲಿ ಶೇ.95ರಷ್ಟು ಸಾಧನೆ ಮಾಡಿದೆ. ಠೇವಣಿಗಳಿಗೆ ಶೇ.9.5 ಹಾಗೂ ಹಿರಿಯ ನಾಗರಿಕಗೆ ಶೇ.5 ಹೆಚ್ಚು ಬಡ್ಡಿ ದರ ನೀಡಲಾಗುತ್ತಿದೆ. ಆಡಿಟ್ ವರ್ಗೀಕರಣದಲ್ಲಿ ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ವ್ಯವಹಾರದಲ್ಲಿ ಪ್ರತಿ ವರ್ಷ ಸಂಘವು ಹಂತ ಹಂತವಾಗಿ ಪ್ರಗತಿಯತ್ತ ಸಾಗುತ್ತಿದೆ ಎಂದರು.
ಸಂಘವು ಗಳಿಸಿದ ಲಾಭಾಂಶಲ್ಲಿ ಶೇ.25ರಂತೆ ಕ್ಷೇಮನಿಧಿ, ಶೇ.2 ಸಹಕಾರ ಶಿಕ್ಷಣ ನಿಧಿ, ಶೇ.0.5 ಸಹಕಾರ ಅಕಾಡೆಮಿ ಮೈಸೂರು, ಶೇ.20 ಕಾರ್ಯಾಚರಣೆ ಮೀಸಲು ನಿಧಿ, ಶೇ.5 ಸಾಮಾನ್ಯ ಕ್ಷೇಮ ನಿಧಿ, ಶೇ.12 ಸದಸ್ಯರಿಗೆ ಡಿವಿಡೆಂಡ್ ಹಾಗೂ ಎರಡು ತಿಂಗಳ ಸಂಬಳದಷ್ಟು ಸಿಬ್ಬಂದಿಗಳಿಗೆ ಬೋನಸ್ ನೀಡಲಾಗುವುದು ಎಂದು ಅಧ್ಯಕ್ಷ ಡಾ.ಯು.ಪಿ ಶಿವಾನಂದ ತಿಳಿಸಿದರು.
ಸಂಘದ ಸಾಧನೆಗೆ ಸದಸ್ಯರಿಂದ ಮೆಚ್ಚುಗೆ:
ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ಚ ಮಾತನಾಡಿ, ಸುದ್ದಿ ಸೌಹಾರ್ಧ ಸಹಕಾರಿ ಸಂಘದ ಆಡಳಿತ ಮಂಡಳಿಯಲ್ಲಿ ಹಿರಿಯ ಅನುಭವಿಗಳು ನಿರ್ದೇಶಕರಾಗಿದ್ದಾರೆ. ಸಂಘ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯತ್ತ ಸಾಗಿದೆ. ವ್ಯವಹಾರದ ಬಗ್ಗೆ ಎಲ್ಲರಲ್ಲೂ ವಿಶ್ವಾಸವಿದೆ. ಕಾರ್ಯನಿರ್ವಹಣಾಧಿಕಾರಿ ನರೇಂದ್ರರವರ ಕಾರ್ಯವೈಖರಿ ಉತ್ತಮವಾಗಿದ್ದು ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ವ್ಯವಹಾರ ಮಾಡುತ್ತಿದ್ದಾರೆ. 10ನೇ ವರ್ಷದ ಸಂಭ್ರಮದಲ್ಲಿರುವ ಈ ಸಹಕಾರ ಸಂಘದ ಅಧ್ಯಕ್ಷ ಡಾ.ಯು.ಪಿ ಶಿವಾನಂದ ನೇತೃತ್ವದ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ರಾಮಕೃಷ್ಣ ಮಾತನಾಡಿ, ಸೆಕ್ಯೂರ್ಡ್ ಲೋನ್ ಹೆಚ್ಚು ಕೊಟ್ಟಿದ್ದು ಸಂತಸದ ವಿಚಾರ. ಠೇವಣಿಯೂ ಏರಿಕೆಯಾಗಿದೆ. ಸಹಕಾರ ಸಂಘವು ಉತ್ತಮ ರೀತಿಯಲ್ಲಿ ನಿರ್ವಹಣೆಯಾಗುತ್ತಿದೆ. ಸಂಘಕ್ಕೆ ಬಂದಾಗ ಸಿಬ್ಬಂದಿಗಳಿಂದ ಉತ್ತಮ ಸಹಕಾರ ಸಿಗುತ್ತಿದೆ. ಇನ್ನಷ್ಟೂ ಠೇವಣಿ ಇಡುವಂತೆ ಪ್ರೋತ್ಸಾಹ ಮಾಡುತ್ತಿದ್ದಾರೆ ಎಂದರು.
ನಿವೃತ್ತ ಉಪ ವಲಯಾರಣ್ಯಾಧಿಕಾರಿ ಕೃಷ್ಣಪ್ಪ ಕೆ. ಮಾತನಾಡಿ, ಅತೀ ಹೆಚ್ಚು ಲಾಭಾಂಶ ಪಡೆದುಕೊಂಡಿರುವುದು ಸಂತಸ ತಂದಿದೆ. ಸಂಘವು ಪ್ರಗತಿಯ ಹಾದಿಯಲ್ಲಿದ್ದು ಡಿವಿಡೆಂಡ್ ಏರಿಕೆ ಮಾಡುವಂತೆ ವಿನಂತಿಸಿದರು.
ಮಹಮ್ಮಾಯಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶೀನ ನಾಯ್ಕ ಮಾತನಾಡಿ, ವಾರ್ಷಿಕ ಲಾಭಾಂಶ ವಿಂಗಡಣೆಯಾಗಿ ರೂ.17 ಲಕ್ಷ ಉಳಿಕೆಯಾಗಿದ್ದು ಅದನ್ನು ಸಮಾಜಮುಖಿ ಕಾರ್ಯಕ್ರಮಗಳಿಗೆ ಬಳಕೆ ಮಾಡಲು ವಿಶೇಷ ನಿಽ ಪ್ರಾರಂಭಿಸಬೇಕು. ಬಡ ಸದಸ್ಯರಿಗೆ ಪ್ರಾಕೃತಿಕ ವಿಕೋಪಗಳಿಗೆ ತೊಂದರೆಯಾದಲ್ಲಿ ಪರಿಹಾರ ನೀಡಲು, ರಾಜಕೀಯ ಹೊರತಾದ ಸಂಘಟನೆಗಳಿಗೆ ದೇಣಿಗೆ ನೀಡಲು ಉಳಿಕೆ ಹಣದಲ್ಲಿ ಶೇ.5 ಮೀಸಲಿಡಲು ಸಹಕಾರಿಯಾಗುವಂತೆ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಬೈಲಾದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಜಯಂತಿ ಎಂ. ರೈ ಮಾತನಾಡಿ, ಸಂಘವು ವರದಿ ವರ್ಷದಲ್ಲಿ ರೂ.59ಲಕ್ಷ ಲಾಭ ಗಳಿಸಿರುವುದಕ್ಕೆ ಆಡಳಿತ ಮಂಡಳಿಗೆ ಅಭಿನಂದನೆ. ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಲಿ. ಎಲ್ಲಾ ತಾಲೂಕುಗಳಲ್ಲಿಯೂ ಶಾಖೆಗಳನ್ನು ತೆರೆಯಲಿ. ವಾಯಿದೆಗೆ ಮುಂಚಿತವಾಗಿ ಸಾಲ ಮರುಪಾವತಿ ಮಾಡಿದವರಿಗೆ ರಿಯಾಯಿತಿ ನೀಡಬೇಕು ಹಾಗೂ ರೂ.5 ಲಕ್ಷಕ್ಕಿಂತ ಹೆಚ್ಚು ಠೇವಣಿಯಿಡುವವರಿಗೆ ಹೆಚ್ಚುವರಿ ಬಡ್ಡಿ ನೀಡುವಂತೆ ವಿನಂತಿಸಿದರು.

ಸುಳ್ಯ ಶಾಖೆ ಸಲಹಾ ಸಮಿತಿ ಸದಸ್ಯ ಯಶ್ವಿತ್ ಕಾಳಮ್ಮನೆ ಮಾತನಾಡಿ, ಶೈಕ್ಷಣಿಕವಾಗಿ ಸಾಧನೆ ಮಾಡುವ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು ಎಂದರು.
ಸಂಘದ ಕಾನೂನು ಸಲಹೆಗಾರ ಮಹಾಬಲ ಗೌಡ ಮಾತನಾಡಿ, 10 ವರ್ಷದಲ್ಲಿ ಸಂಘವು ವೇಗವಾಗಿ ಬೆಳೆದಿದೆ. ಆಡಳಿತ ಮಂಡಳಿ, ಸಲಹಾ ಸಮಿತಿ, ಸಿಬಂದಿಗಳ ಪೂರ್ಣ ಸಹಕಾರದಿಂದ ಅಚ್ಚುಕಟ್ಟಾಗಿ ಮುನ್ನಡೆಯುತ್ತಿದ್ದು ಸದಸ್ಯರಿಗೆ ಪ್ರೀತಿ, ವಿಶ್ವಾಸ ದೊರೆಯುತ್ತಿದೆ. ಈ ಸಂಘವು ರಾಜ್ಯ ಮಟ್ಟದ ಸಂಸ್ಥೆಯಾಗಿ ಬೆಳೆಯಲಿ ಎಂದರು.
ಬೆಳ್ತಂಗಡಿ ಸುದ್ದಿ ಬಿಡುಗಡೆಯ ಸಿಇಓ ಸಿಂಚನಾ ಊರಬೈಲು ಮಾತನಾಡಿ, ಸಹಕಾರಿಯ ಸುಳ್ಯದ ಶಾಖೆ ಅಗಿದೆ. ಬೆಳ್ತಂಗಡಿಯಲ್ಲಿ ಸಾಕಷ್ಟು ಮಂದಿ ಸದಸ್ಯರಿದ್ದು ಅಲ್ಲಿಯೂ ಶಾಖೆ ತೆರೆಯಬೇಕು. ಅಲ್ಲದೇ ಸದಸ್ಯರ ಅನುಕೂಲಕ್ಕಾಗಿ ವಿವಿಧ ಕಡೆಗಳಲ್ಲಿ ಶಾಖೆಗಳನ್ನು ತೆರೆಯಬೇಕು ಎಂದು ಸಲಹೆ ನೀಡಿದರು.
ನಾರಾಯಣ ಪೂಜಾರಿ ಕೊರಿಕ್ಕಾರ ಮಾತನಾಡಿ, 10ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸುದ್ದಿ ಸೌಹಾರ್ದ ಸಹಕಾರಿ ಸಂಘದ ಸಾಧನೆ ಮೆಚ್ಚುವಂತದ್ದು. ಸಂಘವು ಲಾಭದಲ್ಲಿ ಮುನ್ನಡೆಯುತ್ತಿರುವುದರಿಂದ ಹತ್ತನೇ ವರ್ಷದ ಸಂಭ್ರಮಕ್ಕೆ ಹತ್ತು ಕಡೆಗಳಲ್ಲಿ ಶಾಖೆಗಳನ್ನು ತೆರೆಯಬೇಕು. ಸಾರ್ವಜನಿಕರಿಂದಲೂ ಸಂಘದ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿ ಬಂದಿದ್ದು ಸಹಕಾರಿ ಸಂಘವು ರಾಜ್ಯದಲ್ಲಿ ಉತ್ತಮ ಹೆಸರು ಪಡೆಯಲಿ ಎಂದರು.
ಸೂರ್ಯನಾರಾಯಣ ಭಟ್ ಮಾತನಾಡಿ, ಜಾಮೀನು ಸಾಲಗಳನ್ನು ಸಕಾಲಕ್ಕೆ ಮರುಪಾವತಿ ಮಾಡುವ ಸಾಲಗಾರರ ಹಿತ ದೃಷ್ಟಿಯಿಂದ ಸಾಲದ ಮೊತ್ತವನ್ನು ರೂ.2 ಲಕ್ಷದ ಬದಲು ರೂ.5 ಲಕ್ಷಕ್ಕೆ ಏರಿಕೆ ಮಾಡಬೇಕು. ಇದರಿಂದ ಸಂಘಕ್ಕೂ ಸಾಲಗಾರರಿಗೂ ಲಾಭವಿದೆ ಎಂದರು.
ಸರಿತಾ ಶಾಂತಿ ಕುಟಿನ್ಹಾ ಮಾತನಾಡಿ, ಸಂಘದಲ್ಲಿ ನಗು ಮುಖದ ಸೇವೆ ದೊರೆಯುತ್ತಿದೆ. ರೂ.59ಲಕ್ಷ ಲಾಭ ಪಡೆದಿರುವುದು ನಮಗೂ ಸಂತಷ ತಂದಿದ್ದು ಇದರಲ್ಲಿ ಕಾರ್ಯನಿರ್ವಹಣಾಽಕಾರಿಯವರ ಬಹಳಷ್ಟು ಪರಿಶ್ರಮವಿದೆ. ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಿ ಕೋಟಿ ಲಾಭ ಗಳಿಸಲಿ ಎಂದರು.
ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿಗಳಿಗೆ ಗೌರವಾರ್ಪಣೆ:
ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿ ನರೇಂದ್ರ ಎಂ., ಸಿಬ್ಬಂದಿಗಳಾದ ಸುಮಂತ್ ರೈ, ಅನಂತರಾಮ, ಚೇತನ್, ಸಹನಾ ಕೆ., ಮಲ್ಲಿಕಾ, ಪಿಗ್ಮಿ ಸಂಗ್ರಾಹಕರಾದ ಸುಬ್ರಹ್ಮಣ್ಯ, ಶ್ರೀಧರ, ಸತೀಶ ಪ್ರಭು, ಶಿವರಾಮ, ಸುಳ್ಯ ಶಾಖೆಯ ವ್ಯವಸ್ಥಾಪಕ ಚೇತನ್ ಕೆ.ಬಿ., ಸಿಬಂದಿ ವೃದ್ಧಿ ಹಾಗೂ ಪಿಗ್ಮಿ ಸಂಗ್ರಾಹಕಿ ಪವಿತ್ರರವರನ್ನು ಗೌರವಿಸಲಾಯಿತು.
ನಿರ್ದೇಶಕರಾದ ಜಾನ್ ಕುಟಿನ್ಹಾ, ಹರೀಶ್ ಬಂಟ್ವಾಳ, ಎ.ವಿ ನಾರಾಯಣ, ಮೋಹನ ರೈ ಕೆ.ಎಂ., ಸ್ವಾತಿ ಮಲ್ಲಾರ, ಈಶ್ವರ ವಾರಣಾಸಿ, ರಾಜೇಶ್ ಎಂ.ಎಸ್., ಶೇಷಪ್ಪ ಕಜೆಮಾರ್, ಸುಳ್ಯ ಶಾಖಾ ಸಲಹಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ಎನ್.ಕೆ ಜಗನ್ನಿವಾಸ ರಾವ್ ಸ್ವಾಗತಿಸಿದರು. ಕೆ.ಸುಂದರ ನಾಯ್ಕ ವಂದಿಸಿದರು. ಉಪಾಧ್ಯಕ್ಷ ಯು.ಪಿ ರಾಮಕೃಷ್ಣ ಆಡಿಟ್ ವರದಿ ಮಂಡಿಸಿದರು. ಮುಖ್ಯ ಕಾರ್ಯನಿರ್ವಹಣಾಽಕಾರಿ ನರೇಂದ್ರ ಎಂ. ವರದಿ ಮಂಡಿಸಿದರು. ಪಿಗ್ಮಿ ಸಂಗ್ರಾಹಕ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ಲೆಕ್ಕಿಗ ಅನಂತರಾಮ ನೋಟೀಸ್ ಓದಿದರು. ಸುಳ್ಯ ಶಾಖಾ ವ್ಯವಸ್ಥಾಪಕ ಚೇತನ್ ಕೆ.ಬಿ ಆಯ-ವ್ಯಯ ಮಂಡಿಸಿದರು. ಸುದ್ದಿ ಚಾನೆಲ್ ನಿರೂಪಕ ಗೌತಮ್ ಶೆಟ್ಟಿ ಇರಾ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಹಾಸಭೆಯಲ್ಲಿ ಭಾಗವಹಿಸಿದ ಸದಸ್ಯರಿಗೆ ಉಡುಗೊರೆ ನೀಡಲಾಯಿತು.ಸಂಘವು ಹೆಚ್ಚು ಲಾಭ ಗಳಿಸಿದ್ದು ಡಿವಿಡೆಂಡ್ ಹೆಚ್ಚು ಮಾಡಬೇಕು ಎಂದು ಸದಸ್ಯರ ಬೇಡಿಕೆಯಿರಬಹುದು. ಆದರೆ ಸಂಘವು 10 ವರ್ಷಗಳನ್ನು ಪೂರೈಸಿದ್ದು ಮುಂದಿನ ದಿನಗಳಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸುವ ಯೋಜನೆಯಿದೆ. ಅಲ್ಲದೇ ಲಾಭಾಂಶವನ್ನು ವಿವಿಧ ಉದ್ದೇಶಗಳಿಗೆ ವಿಂಗಡಣೆ ಮಾಡಿ ಉಳಿಕೆ ಮೊತ್ತದಲ್ಲಿ ಸದಸ್ಯರ ಮಕ್ಕಳಿಗೆ ಪ್ರಶಸ್ತಿ, ಸಹಕಾರ ಮೊದಲಾದ ಸಾಮಾಜಿಕ ಕೆಲಸಗಳಿಗೆ ಬಳಕೆ ಮಾಡುವ ಚಿಂತನೆಯೂ ಇದೆ. ಈ ಬಗ್ಗೆ ಮಹಾಸಭೆಯಲ್ಲಿ ಬಂದ ಅಭಿಪ್ರಾಯದಂತೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಮುಂದಿನ 3 ತಿಂಗಳಲ್ಲಿ ಸಂಘಕ್ಕೆ ಹೊಸ ಆಡಳಿತ ಮಂಡಳಿ ಅಽಕಾರಕ್ಕೆ ಬರಲಿದ್ದು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರಿಗೆ ಅವಕಾಶವಿದೆ.
-ಡಾ.ಯು.ಪಿ ಶಿವಾನಂದ, ಅಧ್ಯಕ್ಷರು
ಸುದ್ದಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ