ರೋಟರಿ ಪುತ್ತೂರು ವತಿಯಿಂದ ಕಾರ್ಗಿಲ್ ವಿಜಯೋತ್ಸವ

0

ದೇಶ ಸೇವೆಯ ಕನಸು ಪ್ರತಿ ಪ್ರಜೆಯ ಕಣಕಣದಲ್ಲಿರಬೇಕು: ಎಂ ಕೆ ನಾರಾಯಣ ಭಟ್

ಪುತ್ತೂರು: ದೇಶ ಸೇವೆಗಾಗಿ ಪ್ರತಿ ಕ್ಷಣವನ್ನು ಮೀಸಲಿಟ್ಟವರು ನಮ್ಮ ದೇಶ ಕಾಯುವ ಯೋಧರು, ಅವರ ಸೇವೆಗೆ ನಾವು ಸದಾ ಋಣಿಗಳಾಗಿರಬೇಕು, ದೇಶ ಸೇವೆಗೆ ಕೇವಲ ಸೈನಿಕರಷ್ಟೇ ಜವಾಬ್ದಾರಿಯಲ್ಲ ಪ್ರತಿಯೊಬ್ಬ ಪ್ರಜೆಯ ಕಣ ಕಣದಲ್ಲೂ ದೇಶ ಸೇವೆಯ ಕನಸುಗಳಿರಬೇಕು, ಅಂತಹ ವಿಶಾಲ ಮನಸ್ಸು ನಮ್ಮಲ್ಲಿರಬೇಕು ಎಂದು ಭಾರತೀಯ ನೌಕಾಪಡೆಯ ನಿವೃತ್ತ ಪೆಟ್ಟಿ ಅಧಿಕಾರಿ ಎಂಕೆ ನಾರಾಯಣ ಭಟ್ ರವರು ಹೇಳಿದರು.

ರೋಟರಿ ಕ್ಲಬ್ ಪುತ್ತೂರು ವತಿಯಿಂದ ರೋಟರಿ ಜಿ.ಎಲ್ ಸಭಾಭವನದಲ್ಲಿ ಜರಗಿದ ಕಾರ್ಗಿಲ್ ವಿಜಯೋತ್ಸವದ ನೆನಪಿನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಸಭಾಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ. ಶ್ರೀಪ್ರಕಾಶ್ ಬಿ.ರವರು, ಹುತಾತ್ಮರಾದ ಕಾರ್ಗಿಲ್ ಯೋಧರನ್ನು ಸ್ಮರಿಸಿಕೊಳ್ಳುತ್ತಾ ಸೈನಿಕರು ಗಡಿಯಲ್ಲಿ ಸದಾ ಎಚ್ಚರದಿಂದ ಇರುವುದರಿಂದಾಗಿ ನಾವೆಲ್ಲ ಸುಖವಾಗಿ ನಿದ್ರಿಸುತ್ತೇವೆ. ಸೈನಿಕರು ಯಾವುದೇ ಜಾತಿ ಮತ ಪಂಥಗಳಿಗೆ ಮೀಸಲಾದವರಲ್ಲ ಅವರ ನಿಷ್ಕಲ್ಮಶ ಶೌರ್ಯಪೂರ್ಣ ಸೇವೆಗೆ ನಾವೆಲ್ಲ ಶಿರಭಾಗಬೇಕು ಎಂದರು.

ಕ್ಲಬ್ ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀಪತಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೀತಾ ಹೆಗ್ಡೆ ಪ್ರಾರ್ಥಿಸಿದರು ಪ್ರೇಮಾನಂದ ಮತ್ತು ಗುರುರಾಜ ಕೊಳತ್ತಾಯ ಅತಿಥಿಗಳನ್ನು ಪರಿಚಯಿಸಿದರು. ವೃತ್ತಿಪರ ಸೇವಾ ವಿಭಾಗದ ನಿರ್ದೇಶಕ ಸತೀಶ್ ನಾಯಕ್ ಸಹಕರಿಸಿದರು. ಕಾರ್ಯದರ್ಶಿ ಪ್ರೊ| ಸುಬ್ಬಪ್ಪ ಕೈಕಂಬ ವಾರದ ವರದಿಯನ್ನು ವಾಚಿಸಿದರು. ವಸಂತ ಎಸ್ ವಂದಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಸೇನಾನಿ ಲಕ್ಷ್ಮೀಶರವರನ್ನು ಸನ್ಮಾನಿಸಲಾಯಿತು. 

LEAVE A REPLY

Please enter your comment!
Please enter your name here