ಉಪ್ಪಿನಂಗಡಿ: ಹಿರಿಯ ವೈದ್ಯ, ಮಾಳಿಗೆ ಡಾಕ್ಟರ್ ಎಂದೇ ಪ್ರಸಿದ್ಧರಾಗಿದ್ದ ಶತಾಯುಷಿ ಡಾ. ಮುದ್ರಜೆ ರಾಮಚಂದ್ರ ಭಟ್ ಜು.28ರಂದು ರಾತ್ರಿ ನೆಕ್ಕಿಲಾಡಿಯ ಸ್ವಗೃಹದಲ್ಲಿ ವಯೋಸಹಜ ಕಾರಣದಿಂದ ನಿಧನರಾಗಿದ್ದಾರೆ.
ಇವರು ಇತ್ತೀಚೆಗಷ್ಟೇ ತನ್ನ ಶತ ಸಂವತ್ಸರವನ್ನು ಆಚರಿಸಿಕೊಂಡಿದ್ದರು. ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.