ಪುತ್ತೂರು: ಎಸ್ಡಿಪಿಐ ಪುತ್ತೂರು ನಗರ ಸಮಿತಿ ವತಿಯಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮ ಕೂರ್ನಡ್ಕದಲ್ಲಿ ನಡೆಯಿತು.
ಪ್ರಸಕ್ತ ರಾಜಕೀಯ ಸನ್ನೀವೇಶ ಮತ್ತು ಪಕ್ಷದ ತತ್ವ ಸಿದ್ದಾಂತದ ಕುರಿತು ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಎ.ಕೆ ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ಸುಮಾರು 22 ಮಂದಿ ಹಿರಿಯರು ಮತ್ತು ಯುವಕರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಎ.ಕೆ ರವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಸಿರಾಜ್ ಕೂರ್ನಡ್ಕ, ಪುತ್ತೂರು ನಗರ ಸಮಿತಿ ಅಧ್ಯಕ್ಷ ಯಹ್ಯಾ ಕೂರ್ನಡ್ಕ, ಉಪಾಧ್ಯಕ್ಷ ಶಮೀರ್ ನಾಜೂಕ್, ಸಂಜಯ್ ನಗರ ಬ್ರಾಂಚ್ ಸಮಿತಿ ಅಧ್ಯಕ್ಷ ಹಾರಿಸ್ ಪಠಾಣ್ ಉಪಸ್ಥಿತರಿದ್ದರು.