ಕೌಡಿಚ್ಚಾರು ಶ್ರೀ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿ

0

ಅರಿಯಡ್ಕ: ಸಾರ್ವಜನಿಕ ಶ್ರೀ ನಾಗನ ಕಟ್ಟೆ ಸಮಿತಿ ಕೌಡಿಚ್ಚಾರು ಅರಿಯಡ್ಕ ಇದರ ವತಿಯಿಂದ ಕೌಡಿಚ್ಚಾರು ಶ್ರೀ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿಯ ಪ್ರಯುಕ್ತ ವಿಶೇಷ ಪೂಜೆ, ಕ್ಷೀರಾಭಿಷೇಕ , ಸೀಯಾಳಾಭಿಷೇಕ,ತಂಬಿಲ ಸೇವೆ ಜು.29 ರಂದು ಕಾವು ಪಂಚಲಿಂಗೇಶ್ವರ ದೇವಸ್ಥಾನದ ಪುರೋಹಿತರಾದ ಶಿವಪ್ರಸಾದ್ ಕಡಮಣ್ಣಾಯವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಭಜನಾ ಮಂದಿರದ‌ ಅಧ್ಯಕ್ಷರು ಹಾಗೂ ಸದಸ್ಯರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೌಡಿಚ್ಚಾರು ಇದರ ಪದಾಧಿಕಾರಿಗಳು,ವಾಹನ ಚಾಲಕ ಮಾಲಕರ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here