ನಿಡ್ಪಳ್ಳಿ: ಇಲ್ಲಿಯ ಗ್ರಾಮದ ಮೂಲ ನಾಗ ಕಂಬಳತ್ತಡ್ಡ ಸನ್ನಿಧಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗ ದೇವರಿಗೆ ಕ್ಷೀರಾಭೀಷೇಕ ನಡೆಯಿತು.
ಅಲ್ಲದೆ ಸಾನಿಧ್ಯದಲ್ಲಿ ಇರುವ ಧೂಮಾವತಿ, ರಕ್ತೇಶ್ವರಿ ಶಕ್ತಿಗಳಿಗೂ ತಂಬಿಲ ಸೇವೆ ನಡೆಯಿತು.ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ ಮತ್ತು ಸದಸ್ಯರು, ರಾಜಾರಾಮ ಭಟ್ ನಾಕುಡೇಲು, ಗುರಿ ಬಾರಿಕೆ, ಪಟ್ಟೆ ತರವಾಡು ಕುಟುಂಬಸ್ಥರು ಹಾಗೂ ಗ್ರಾಮದ ಭಕ್ತಾದಿಗಳು ಪಾಲ್ಗೊಂಡರು. ಶ್ರೀ ಶಾಂತದುರ್ಗಾ ದೇವಸ್ಥಾನದ ಅರ್ಚಕ ನವೀನ್ ಹೆಬ್ಬಾರ್ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು.
