ರಾಮಕುಂಜ: ಕಡಬ ತಾಲೂಕು ಕೊೖಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ಶ್ರೀ ನಾಗದೇವರಿಗೆ ಸೀಯಾಳ, ಕ್ಷೀರ ಅಭಿಷೇಕ ನಡೆಯಿತು.
ದೇವಳದ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಾಜ್ ಕುಮಾರ್ ರೈ ಮತ್ತು ಸದಸ್ಯರು, ಮಾಜಿ ಅಧ್ಯಕ್ಷ ಯಧುಶ್ರೀ ಆನೆಗುಂಡಿ, ದೇವಸ್ಥಾನದ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
