ಪೆರ್ನಾಜೆ: ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಉಳ್ಳಿಂಜ ನಿವಾಸಿ ಕಾಕುಂಜೆ ಜಯರಾಮ್ ಭಟ್ ರವರ ಪತ್ನಿ ಉಳ್ಳಿಂಜ ಪಾರ್ವತಿ (61ವ ) ಜು.28ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಪಾರ್ವತಿ ವೇಣೂರು ಮಹಿಳಾ ಮಂಡಲದ ಮಾಜಿ ಅಧ್ಯಕ್ಷರಾಗಿದ್ದು, ಹಲವಾರು ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿದ್ದು, ಅಲ್ಲದೆ ಜಯಶಾಲಿಯಾಗಿಯೂ ಮದುವೆ ಮಕ್ಕಳ, ವಧು ಸಿಂಗಾರ, ಅಡಿಕೆ ಹಿಂಗಾರದ ಮಾಲೆ ಕುಸುರಿ ಕಲೆಯಾದ ಮಣಿ ಮಾಲೆ, ತೋರಣ, ವೈರ್ ಬ್ಯಾಗ್ ಶೃಂಗಾರ, ಆಭರಣಗಳನ್ನು ತಯಾರಿಸಿ ತನ್ನ ಬಿಡುವಿನ ವೇಳೆಯಲ್ಲಿ ಸಾಧನೆಯನ್ನು ಮಾಡುತ್ತಾ ಎಲ್ಲರನ್ನೂ ಒಗ್ಗೂಡಿಸಿ, ಕಲಾ ನಿರೂಪಕರು ಸಂಘದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು.
ಮೃತರ ತಾಯಿ ಶಾರದಮ್ಮ, ಪೆರ್ನಾಜೆ ಸಹೋದರರಾದ ಸತ್ಯನಾರಾಯಣ ಭಟ್ ಪಿಲ್ಯ ಪೆರ್ನಾಜೆ, ಕುಮಾರ್ ಪೆರ್ನಾಜೆ ಬರಹಗಾರರು ಜೇನು ತಜ್ಞ, ಆರ್ ಎನ್ ಶೆಟ್ಟಿ ಕಾಲೇಜ್ ಮುರ್ಡೇಶ್ವರ ಉಪನ್ಯಾಸಕರು ಕೃಷ್ಣ ಪ್ರಸಾದ್ ಪೆರ್ನಾಜೆ, ಸಹೋದರಿಯರಾದ ಸರಸ್ವತಿ ಪ್ರಕಾಶ್ ಕೋಟೆ ಸುಳ್ಯ, ಶಂಕರಿ ಬಾಲಕೃಷ್ಣ ಶರ್ಮ ಪುದುಕೋಳಿ ನಿರ್ಚಾಲು, ಪತಿ ಜಯರಾಮ್ ಭಟ್, ಪುತ್ರರಾದ ರವೀಂದ್ರ ಭಟ್ ಉಳ್ಳಿಂಜ ಸೊಸೆ ವಿನಯ, ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ರಘುನಂದನ ಉಳ್ಳಿಂಜ, ಸೊಸೆ ಕಾವ್ಯಶ್ರೀ , ಪುತ್ರಿ ರಮ್ಯಾ ಶ್ಯಾಮ್ ಉಡುಪಿ,
ಅಳಿಯ ವಿಜಯಶ್ಯಾಮ್ ಗುತ್ತು ಉಡುಪಿ, ಮೊಮ್ಮಕ್ಕಳಾದ ಚಿರಂತನ, ವೈಷ್ಣವಿ, ಪರ್ಜನ್ಯ ರಾಮ, ಹೃತಿಕ್ ಕೃಷ್ಣ , ಸ್ವದಾ ಹಲವಾರು ಮಂದಿ ಬಂಧು-ಮಿತ್ರರನ್ನು ಅಗಲಿದ್ದಾರೆ.