ಉಪ್ಪಿನಂಗಡಿ: ವನಭೋಜನದ ನಾಗನ ಕಟ್ಟೆಯಲ್ಲಿ ನಾಗರಪಂಚಮಿ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ವನಭೊಜನದಲ್ಲಿ ನಾಗರಪಂಚಮಿ ಪ್ರಯುಕ್ತ ನಾಗದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ಶ್ರದ್ಧಾ ಭಕ್ತಿಯಿಂದ ನಡೆಯಿತು.
ಪೂಜಾ ವಿಧಿವಿಧಾನಗಳನ್ನು ಕ್ಷೇತ್ರ ಪುರೋಹಿತರಾದ ಪಿ.ನರಸಿಂಹ ಭಟ್ ಹಾಗೂ ಸಂದೀಪ್ ಭಟ್ ನೆರವೇರಿಸಿದರು.


ಈ ಸಂದರ್ಭದಲ್ಲಿ ಶ್ರೀ ದೇವಾಲಯದ ಆಡಳಿತ ಮೊಕ್ತೇಸರರಾದ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಯು.ನಾಗರಾಜ ಭಟ್, ಡಾ.ಎಂ.ರತ್ನಾಕರ ಶೆಣೈ, ಕೆ.ಅನಂತರರಾಯ ಕಿಣಿ, ಪ್ರಮುಖರಾದ ಕರಾಯ ಗಣೇಶ ನಾಯಕ್, ಪ್ರಕಾಶ ಭಟ್, ಕೆ. ಸತೀಶ ನಾಯಕ್, ಯು. ವರದರಾಜ ಭಟ್, ವಿಠಲ್‌ದಾಸ್ ಮಲ್ಯ, ಸರ್ವೇಶ್ ಭಟ್, ವಿದ್ಯಾಧರ ಮಲ್ಯ, ಕರಾಯ ರಾಘವೇಂದ್ರ ನಾಯಕ್, ಕೆ. ರಾಜೇಶ ಪೈ, ಗಿರೀಶ್ ಪೈ , ಕೇದಾರನಾಥ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here