ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮಿಶನ್ಮೂಲೆ ಮೂಲ ನಾಗಸ್ಥಾನದಲ್ಲಿ ಜು.30ರಂದು ನಾಗರಪಂಚಮಿ ಆಚರಣೆಯನ್ನು ಆಚರಿಸಲಾಯಿತು.
ಅರ್ಚಕರಾದ ಉದಯ ಭಟ್ ರವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ರೈ ಮಿಶನ್ ಮೂಲೆ, ಸತೀಶ್ ರೈ ಮಿಶನ್ ಮೂಲೆ, ಅಧ್ಯಕ್ಷ ರಾಮ ಶೆಟ್ಟಿ, ಲೆಕ್ಕ ಪರಿಶೋಧಕ ವಿಶ್ವನಾಥ ಶೆಟ್ಟಿ ಮಿಶನ್ ಮೂಲೆ, ಕಾರ್ಯದರ್ಶಿ ಕೆ.ಬಿ ಶೇಖರ, ಉಪಾಧ್ಯಕ್ಷ ಸಂತೋಷ್ ಕುಮಾರ್, ಸತೀಶ್ ಎಂ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಶೆಟ್ಟಿ, ಸುಂದರ ಕೆ, ಸಂತೋಷ್ ರೈ, ಕೋಶಾಧಿಕಾರಿ ಮೋಹನ್ ಕುಮಾರ್ ಡಿ. ಸಹಿತ ಹಲವಾರು ಭಕ್ತರು ಪಾಲ್ಗೊಂಡರು.